Connect with us

    LATEST NEWS

    ಹಾಡಿ ನಲಿಯಬೇಕಿದ್ದ ಪೋರ ಹಾಸಿಗೆ ಹಿಡಿದ, ಚಿಕಿತ್ಸೆಗೆ ಹಣವಿಲ್ಲದೆ ಪರದಾಟುತ್ತಿದೆ ಕುಟುಂಬ….

    ಹಾಡಿ ನಲಿಯಬೇಕಿದ್ದ ಪೋರ ಹಾಸಿಗೆ ಹಿಡಿದ, ಚಿಕಿತ್ಸೆಗೆ ಹಣವಿಲ್ಲದೆ ಪರದಾಟುತ್ತಿದೆ ಕುಟುಂಬ….

    ಮಂಗಳೂರು, ಅಕ್ಟೋಬರ್ 17: ತನ್ನ ವಯಸ್ಸಿನ ಮಕ್ಕಳೊಂದಿಗೆ ಹಾಡಿ ನಲಿಯಬೇಕಿದ್ದ ಪುಟ್ಟ ಬಾಲಕನೋರ್ವ ಅನಾರೋಗ್ಯದ ಕಾರಣ ಜೀವಕ್ಕಾಗಿ ಹೋರಾಟ ನಡೆಸಬೇಕಾದ ಪರಿಸ್ಥಿತಿಯಿದೆ.

    ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕು ನಗರದ ಉಲ್ಲಾಂಡಿ ನಿವಾಸಿಯಾಗಿರುವ 7 ವರ್ಷದ ರಜತೀಶ್ ಗೆ ಮೂಳೆಮಚ್ಚೆಯಲ್ಲಿ ರಕ್ತ ಉತ್ಪತ್ತಿಯಾಗದ ಸಮಸ್ಯೆಯಿದೆ.

    ಕಳೆದ ಆರು ವರ್ಷಗಳ ಕಾಲ ಆರೋಗ್ಯವಾಗಿಯೇ ಇದ್ದ ರಜನೀಶ್ ಒಂದು ದಿನ ಶಾಲೆಯಿಂದ ಮನೆಗೆ ಬಂದವನೇ ಜ್ವರದ ಕಾರಣಕ್ಕಾಗಿ ಹಾಸಿಗೆ ಹಿಡಿದಿದ್ದಾನೆ.

    ಬಳಿಕದ ದಿನಗಳಲ್ಲಿ ಪ್ರಜ್ಞೆ ತಪ್ಪುವ ಹಾಗೂ ಮೂಗು ಬಾಯಿಗಳಲ್ಲಿ ರಕ್ತ ಸೋರುವ ಲಕ್ಷಣ ಕಂಡು ಬಂದಿದೆ.

    ಈ ಹಿನ್ನಲೆಯಲ್ಲಿ ಈತನನ್ನು ಪೋಷಕರು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಿದ್ದರೂ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಗೆ ಕರೆದೊಯ್ದಲಾಗಿತ್ತು.

    ರಜನೀಶ್ ನನ್ನು ಪರೀಕ್ಷಿಸಿದ ವೈದ್ಯರು ಇದು ಮೂಳೆಮಚ್ಚೆಯಲ್ಲಿ ರಕ್ತ ಉತ್ಪತ್ತಿಯಾಗದ ಕಾರಣ ಬಂದಿರುವ ಖಾಯಿಲೆ ಎಂದು ಪತ್ತೆ ಹಚ್ಚಿದ್ದಾರೆ.

    ಶಸ್ತ್ರಚಿಕಿತ್ಸೆಗಾಗಿ 70 ಲಕ್ಷ ರೂಪಾಯಿಗಳ ಅಗತ್ಯವಿದೆ ಎನ್ನುವ ಭಯಾನಕ ಸುದ್ಧಿಯನ್ನೂ ರಜನೀಶ್ ನ ಬಡ ಹೆತ್ತವರಿಗೆ ನೀಡಿದ್ದಾರೆ.

    ಅಲ್ಲದೆ ಆಸ್ಪತ್ರೆಯ ವೈದ್ಯರು ನೀಡಿದ ಎಲ್ಲಾ ಚಿಕಿತ್ಸೆಗಳನ್ನು ಉಚಿತವಾಗಿ ಮಾಡಿ ಮಾನವೀಯತೆಯನ್ನೂ ಮೆರೆದಿದ್ದರು.

    ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿರುವ ರಜನೀಶ್ ಪೋಷಕರಿಗೆ ಈ ಮೊತ್ತವನ್ನು ಕೂಡಿಸುವುದು ಕನಸಿನಲ್ಲೂ ನಿಲುಕದ ಮಾತಾಗಿದ್ದು, ಬಡ ಪೋಷಕರು ಇದೀಗ ದಾನಿಗಳ ಮೊರೆ ಹೋಗಿದ್ದಾರೆ.

    ಪುತ್ತೂರು ನಗರದ ಉರ್ಲಾಂಡಿಯ ನಾಯರಡ್ಕ ಎಂಬಲ್ಲಿನ ರಮಶ್ ಹಾಗೂ ಜಯಂತಿ ದಂಪತಿಗಳ ಮೂರು ಮಕ್ಕಳಲ್ಲಿ ಎರಡನೇ ಮಗನಾಗಿರುವ ರಜನೀಶ್ ನ ತಿಂಗಳ ಮದ್ದಿಗೇ ಸಾವಿರಾರು ರೂಪಾಯಿಗಳು ಖರ್ಚಾಗುತ್ತಿದೆ.

    ಆರ್ಥಿಕವಾಗಿ ಬಳಲಿರುವ ಈ ಕುಟುಂಬ ರಜನೀಶ್ ಚಿಕಿತ್ಸೆಗೆ ಹಣವಿಲ್ಲದೆ ಎರಡು ತಿಂಗಳು ಮಂಗಳೂರಿನ ಸರಕಾರಿ ಆಸ್ಪತ್ರೆಯಲ್ಲಿ ಆತನನ್ನು ದಾಖಲಿಸಿದ್ದರು.

    ಒಮ್ಮೆ ರಕ್ತ ನೀಡಿದಲ್ಲಿ ಒಂದೆರಡು ವಾರ ಆರೋಗ್ಯ ಸ್ಥಿರವಾಗಿದ್ದರೆ, ಎರಡು ವಾರಗಳ ಬಳಿಕ ಮತ್ತೆ ಆನಾರೋಗ್ಯ ಕಾಣಿಸಿಕೊಳ್ಳುತ್ತಿದೆ.

    ಈತನ ಚಿಕಿತ್ಸೆಗಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೂ ಮನವಿ ಮಾಡಲಾಗಿತ್ತು.

    ಪರಿಹಾರ ನಿಧಿಯಿಂದ ಚಿಕಿತ್ಸೆಗಾಗಿ 90 ಸಾವಿರ ರೂಪಾಯಿಗಳು ಮಂಜೂರಾಗಿದ್ದರೂ ,ಅದು ಸಮಯಕ್ಕೆ ಬಳಕೆಯಾಗದ ಕಾರಣ ಬಂದ ಹಣವೂ ವಾಪಾಸು ಹೋಗಿದೆ.

    ಅತ್ಯಂತ ಕಡು ಬಡತನದಲ್ಲಿರುವ ಈ ಕುಟುಂಬ ಇದೀಗ ದಾನಿಗಳ ಸಹಾಯದ ನಿರೀಕ್ಷೆಯಲ್ಲಿದೆ.

    ಸಹಾಯ ನೀಡಲಿಚ್ಛಿಸುವ ದಾನಿಗಳು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪುತ್ತೂರು ಶಾಖೆ.

    ಖಾತೆ ಸಂಖ್ಯೆ–64168899351
    IFSC—SBI-0040152
    ಖಾತೆದಾರನ ಹೆಸರು..ರಮೇಶ್

    Share Information
    Advertisement
    Click to comment

    You must be logged in to post a comment Login

    Leave a Reply