Connect with us

LATEST NEWS

ಅಶ್ಲೀಲ ವಿಡಿಯೋ ಚಿತ್ರೀಕರಣ ಬಾಲಿವುಡ್ ನಟಿ ಪೂನಂ ಪಾಂಡೆ ಆರೆಸ್ಟ್

ಗೋವಾ ನವೆಂಬರ್ 5: ಗೋವಾದ ನಿಷೇಧಿತ ಪ್ರದೇಶದಲ್ಲಿ ಅಶ್ಲೀಲ ವಿಡಿಯೋ ಚಿತ್ರೀಕರಣ ನಡೆಸಿದ್ದಕ್ಕೆ ಬಾಲಿವುಡ್ ನಟಿ ಪೂನಂ ಪಾಂಡೆ ಅವರನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ.


ಗೋವಾದ ಚಾಪೋಲಿ ಡ್ಯಾಮ್ ನಲ್ಲಿ ಅಶ್ಲೀಲ ವಿಡಿಯೋ ಚಿತ್ರೀಕರಣ ನಡೆಸಿದ್ದರೆಂದು ಗೋವಾ ಫರ್ವರ್ಡ್ ಪಾರ್ಟಿಯ ಮಹಿಳಾ ಘಟಕ ಪೂನಂ ಪಾಡೆ ವಿರುದ್ಧ ದೂರು ದಾಖಲಿಸಿದೆ.ಈ ಹಿನ್ನಲೆ ಅದೇ ಪ್ರಕರಣಕ್ಕೆ ಸಂಬಂಧಿಸಿ ಕ್ಯಾನಕೋನಾ ಪೋಲೀಸ್ ಠಾಣೆಯಲ್ಲಿ ಸಹ ಎಫ್ಐಆರ್ ದಾಖಲಾಗಿದೆ.


ಈ ಹಿನ್ನಲೆ ಇಂದು ಗೋವಾದಲ್ಲಿ ಇಂದು ಪೂನಂ ಪಾಂಡೆಯವರನ್ನು ಕಾನಕೋನ ಪೊಲೀಸರು ಬಂಧಿಸಿದ್ದಾರೆ.


ಇತ್ತೀಚೆಗಷ್ಟೇ ಸ್ಯಾಮ್ ಅಹ್ಮದ್ ಅವರನ್ನು ಮದುವೆಯಾಗಿದ್ದ ಪೂನಂ ಪಾಂಡೆ ಗೋವಾದಲ್ಲಿ ಶೂಟಿಂಗ್ ತೆರಳಿದ್ದ ಸಂದರ್ಭ ತನ್ನ ಪತಿ ವಿರುದ್ಧ ಕಿರುಕುಳ, ಬೆದರಿಕೆ ಹಾಗೂ ಹಲ್ಲೆ ಆರೋಪ ಹೊರಿಸಿ ಗೋವಾದಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ಚಿತ್ರ ನಿರ್ಮಾಪಕನನ್ನು ಬಂಧಿಸಿದ್ದು ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.

Facebook Comments

comments