DAKSHINA KANNADA
ಭಾರತೀಯ ಸೈನಿಕರಿಗಾಗಿ ಪ್ರತೀ ಮಂದಿರ ಮಠ ಚರ್ಚ್ ಮತ್ತು ಮಸೀದಿಗಳಲ್ಲಿ ಪ್ರಾರ್ಥನೆಗಳು ನಡೆಯಬೇಕು – ಅರುಣ್ ಕುಮಾರ್ ಪುತ್ತಿಲ

ಪುತ್ತೂರು ಮೇ 07: ಪಹಲ್ಗಾಮ್ ನಲ್ಲಿ ಅಮಾಯಕ ಪ್ರವಾಸಿಗರ ಮೇಲೆ ದಾಳಿ ಮಾಡಿದ ಉಗ್ರರಿಗೆ ಭಾರತೀಯ ಸೇನೆ ಸರಿಯಾದ ಉತ್ತರವನ್ನೇ ನೀಡಿದೆ. ಪಾಕಿಸ್ತಾನದಲ್ಲಿರುವ ಉಗ್ರರ ನೆಲೆಗಳ ಮೇಲೆ ದಾಳಿ ಮಾಡಿ ಪುಡಿಗೈದಿದೆ. ಉಗ್ರರ ಮೇಲೆ ದಾಳಿ ಮಾಡಿರುವ ಸೈನಿಕರಿಗೆ ಮತ್ತಷ್ಟು ಸ್ಥೈರ್ಯ ತುಂಬಿಸಲು ಪುತ್ತೂರಿನಲ್ಲಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ. ಮಹಾಲಿಂಗೇಶ್ವರ ದೇವಾಲಯ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ.
ದೇವರ ಪ್ರಾರ್ಥನೆ ನೆರವೇರಿಸಿ ಮಾತನಾಡಿದ ಹಿಂದೂ ಮುಂಂಡ ಅರುಣ್ ಕುಮಾರ್ ಪುತ್ತಿಲ, ಪಹಲ್ಗಾಮ್ ನಲ್ಲಿ ಮಹಿಳೆಯರ ಮುಂದೆಯೇ ಅವರ ಸಿಂಧೂರವನ್ನು ಅಳಿಸುವ ಕೆಲಸ ಮಾಡಲಾಗಿತ್ತು. ನಾಗರಿಕರ ಮೇಲೆ ಅಮಾನುಷವಾಗಿ ದಾಳಿ ಮಾಡಿ ಕೊಲ್ಲಲಾಗಿತ್ತು. ಕೇಂದ್ರ ಸರಕಾರ ಇದೀಗ ಉಗ್ರರಿಗೆ ಸೂಕ್ತ ಉತ್ತರ ನೀಡಿದೆ. ಮಹಿಳೆಯರ ಸಿಂಧೂರ ಅಳಿಸಿದ ಉಗ್ರರಿಗೆ ತಕ್ಕ ಪಾಠ ಕಲಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಉಗ್ರರ ಮಟ್ಟ ಹಾಕಲು ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಜಿಹಾದಿ ಉಗ್ರರ ಮೇಲೆ ಇನ್ನಷ್ಟು ದಾಳಿಗಳು ನಡೆಯಬೇಕು. ಸೈನಿಕರಿಗೆ ಇನ್ನಷ್ಟು ಬಲ ನೀಡಬೇಕೆಂದು ಈ ಪ್ರಾರ್ಥನೆ ನೆರವೇರಿಸಲಾಗಿದೆ. ಪ್ರತೀ ಮಂದಿರ,ಮಠ, ಚರ್ಚ್ ಮತ್ತು ಮಸೀದಿಗಳಲ್ಲಿ ಇಂಥ ಪ್ರಾರ್ಥನೆಗಳು ನಡೆಯಬೇಕು ಎಂದು ಅರುಣ್ ಕುಮಾರ್ ಪುತ್ತಿಲ ಹೇಳಿದ್ದಾರೆ.
