LATEST NEWS
ಮಾಜಿ ಸಚಿವೆ ಸುಮಾ ವಸಂತ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಜನಾರ್ಧನ ಪೂಜಾರಿ

ಮಾಜಿ ಸಚಿವೆ ಸುಮಾ ವಸಂತ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಜನಾರ್ಧನ ಪೂಜಾರಿ
ಮಂಗಳೂರು ಫೆಬ್ರವರಿ 13: ಕಾಂಗ್ರೇಸ್ ನ ಹಿರಿಯ ಮುಖಂಡ ಜನಾರ್ಧನ ಪೂಜಾರಿ ತಮ್ಮ ಆತ್ಮಕಥೆ ಸಾಲಮೇಳದ ಸಂಗ್ರಾಮ ಮರು ಮುದ್ರಿತ ಪ್ರತಿಯನ್ನು ಇಂದು ಕುದ್ರೋಳಿಯಲ್ಲಿ ಬಿಡುಗಡೆಗೊಳಿಸಿದರು. . ಶ್ರೀ ಕ್ಷೇತ್ರ ಕುದ್ರೋಳಿ ಗೋಕರ್ಣನಾಥೇಶ್ವರ ದೇವಾಲಯದ ಆವರಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮ ದಲ್ಲಿ ತಮ್ಮ ಮರು ಮುದ್ರಿತ ಆತ್ಮಕಥೆ ಸಾಲ ಮೇಳದ ಸಂಗ್ರಾಮ ಬಿಡುಗಡೆ ಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜನಾರ್ಧನ ಪೂಜಾರಿ ಮಾಜಿ ಸಚಿವೆ

ಕರ್ನಾಟಕ ವಿದ್ಯುತ್ ನಿಗಮದ ನಿರ್ದೇಶಕಿ ಸುಮಾ ವಸಂತ್ ಅವರ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಪ್ರತಿ ವರ್ಷ ಶಿವರಾತ್ರಿ ಜಾಗರಣೆಗೆ ಸುಮಾ ವಸಂತ್ ಕುದ್ರೋಳಿಗೆ ಬರುತ್ತಿದ್ದರು. ಆದರೆ ಈ ಬಾರಿ ಸುಮಾ ವಸಂತ್ ಕುದ್ರೋಳಿಯನ್ನು ಮರೆತಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು. ಕುದ್ರೋಳಿಗೆ ಬಂದಿದ್ದರಿಂದ ಸುಮಾ ವಸಂತ್ ದೊಡ್ಡ ಹುದ್ದೆಗೇರುವಂತಾಗಿತ್ತು . ಪರಮಾತ್ಮನ ಕ್ಷೇತ್ರದಲ್ಲಿ ಹೇಳುತ್ತಿದ್ದೆನೆ, ಸುಮಾ ಪ್ರಮಾದ ಮಾಡಿದ್ದಾರೆ ಎಂದು ಕಿಡಿಕಾರಿದರು.
ಪೂಜಾರಿ ಅವರ ಆತ್ಮಕಥೆ ಪುಸ್ತಕದಲ್ಲಿ ಬರೆದಿರುವ ಸುಳ್ಳು ಎಂದು ಜೆಡಿಎಸ್ ಮುಖಂಡ ಮಧು ಬಂಗಾರಪ್ಪ ಅವರ ಹೇಳಿಕೆಗೆ ತಿರುಗೇಟು ನೀಡಿದ ಪೂಜಾರಿ ನನ್ನ ಆತ್ಮಚರಿತ್ರೆಯಲ್ಲಿ ಪುಸ್ತಕದಲ್ಲಿ ಏನು ಬರೆದಿದ್ದೇನೊ, ಅವೆಲ್ಲವೂ ಸತ್ಯ , ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವದಂತೆ ಸತ್ಯವನ್ನೇ ಹೇಳಿದ್ದೇನೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಬಿ. ಜನಾರ್ದನ ಪೂಜಾರಿ ತಿಳಿಸಿದರು. ನಾವು ಬಿಲ್ಲವರು, ಸತ್ಯ ಹೇಳಲು ಭಯಪಡಲ್ಲ . ಬಂಗಾರಪ್ಪ ಅವರ ಕುರಿತು ಬರೆದಿರುವುದೆಲ್ಲ ಸತ್ಯ ಎಂದು ಹೇಳಿದರು.