FILM
ಹಸೆಮಣೆ ಏರಲು ತಯಾರಾದ ಮುಂಗಾರು ಮಳೆ ಖ್ಯಾತಿಯ ನಟಿ ಪೂಜಾಗಾಂಧಿ

ಬೆಂಗಳೂರು ನವೆಂಬರ್ 28: ಮುಂಗಾರು ಮಳೆ ಖ್ಯಾತಿಯ ನಟಿ ಪೂಜಾ ಗಾಂಧಿ ಹಸಮಣೆ ಏರಲು ಮುಂದಾಗುತ್ತಿದ್ದಾರೆ. ತಾವು ಪ್ರೀತಿಸುತ್ತಿರುವ ಹುಡುಗನನ್ನೇ ಮದುವೆಯಾಗುತ್ತಿದ್ದಾರೆ.
ಮುಂಗಾರು ಮಳೆ ಖ್ಯಾತಿಯ ನಟಿ ಪೂಜಾ ಗಾಂಧಿ ಮದುವೆ ಆಗುತ್ತಿದ್ದಾರೆ ಎಂಬ ಬ್ರೇಕಿಂಗ್ ನ್ಯೂಸ್ ವೈರಲ್ ಆಗುತ್ತಿದೆ. ಹುಡುಗ ಬೆಂಗಳೂರಿನಲ್ಲಿ ಲಾಜೆಸ್ಟಿಕ್ ಕಂಪನಿ ಓನರ್ ವಿಜಯ್ ಎಂಬುವರ ಜೊತೆ 29 ನವೆಂಬರ್ 2023ರಂದು ಬೆಂಗಳೂರಿನ ಯಲಹಂಕದಲ್ಲಿ ಮಂತ್ರ ಮಾಂಗಲ್ಯ ಪದ್ಧತಿಯಲ್ಲಿ ಮದುವೆಯಾಗಲಿದ್ದಾರೆ. ಈ ವಿಷಯವನ್ನು ಸ್ವತಃ ಪೂಜಾ ಗಾಂಧಿಯವರೇ ಪತ್ರದ ಮೂಲಕ ಬಹಿರಂಗ ಪಡಿಸಿದ್ದಾರೆ.

ವಿಜಯ್ ಅವರೇ ಪೂಜಾ ಗಾಂಧಿಯವರಿಗೆ ಕನ್ನಡ ಕಲಿಸಿದ್ದು ಎಂಬ ಮಾಹಿತಿಯೂ ಲಭ್ಯವಾಗಿದೆ. ಕನ್ನಡದಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರ ಮನಗೆದ್ದಿರುವ ನಟಿ ಪೂಜಾ ಗಾಂಧಿ, ಕನ್ನಡವನ್ನು ಕಲಿತು ಭೇಷ್ ಎನಿಸಿಕೊಂಡಿದ್ದಾರೆ.
ಪೂಜಾ ಗಾಂಧಿ ಮೂಲತಃ ಬೆಂಗಾಲಿ ಕುಟುಂಬದವರು. ಹುಟ್ಟಿದ್ದು ಉತ್ತರ ಪ್ರದೇಶದ ಮೀರತ್, ಬೆಳೆದಿದ್ದು ಓದಿದ್ದು ದೆಹಲಿಯಲ್ಲಿ ಎನ್ನಲಾಗಿದೆ. ಮುಂಗಾರು ಮಳೆ ಸಿನಿಮಾ ಮೂಲಕ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ನಟಿ ಪೂಜಾ ಗಾಂಧಿ, ಇಲ್ಲಿ ಸಕ್ಸಸ್ ಪಡೆದುಕೊಂಡು ನೆಲೆ ನಿಂತವರು. ಕನ್ನಡ ಸೇರಿದಂತೆ ಮಲಯಾಳಂ, ಬೆಂಗಾಲಿ ಸಿನಿಮಾರಂಗಗಳಲ್ಲಿ ನಟಿ ಪೂಜಾ ಗಾಂಧಿ ಕೆಲಸ ಮಾಡಿದವರು. ಅವರ ಮೊದಲ ಹೆಸರು ಸಂಜನಾ ಗಾಂಧಿ.