FILM
ಕರಾವಳಿ ಬೆಡಗಿ ಪೂಜಾ ಹೆಗ್ಡೆ ಬೋಲ್ಡ್ ಲುಕ್…!!

ಮುಂಬೈ: ಕರಾವಳಿ ಬೆಡಗಿ ಪೂಜಾ ಹೆಗ್ಡೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಪೋಟೋಗಳು ಇದೀಗ ಸಖತ್ ವೈರಲ್ ಆಗಿವೆ.
ತೆಲುಗಿನಲ್ಲಿ ಸದ್ಯ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿ ಎಂದು ಹೆಸರ ಮಾಡಿರುವ ಪೂಜಾ ಹೆಗ್ಡೆ ಅಲಾ ವೈಕುಂಠಪುರಂ’ ತೆಲುಗು ಸಿನಿಮಾ ನಂತರ ಸಾಕಷ್ಟು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಯಾವಾಗಲೂ ಆಕ್ಟಿವ್ ಆಗಿರುವ ಪೂಜಾ ಹೆಗ್ಡೆ ಇತ್ತೀಚೆಗೆ ಪೋಟೋಶೂಟ್ ಮಾಡಿಸಿದ್ದು, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.
ಸದ್ಯ ಪೋಟೋಗಳು ಇಂಟರ್‌ನೆಟ್‌ನಲ್ಲಿ ಸದ್ದು ಮಾಡಿವೆ. ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಹೊಸ ಪೋಟೊಶೂಟ್‌ನ ಫೋಟೊಗಳನ್ನು ಹಂಚಿಕೊಂಡಿರುವ ಪೂಜಾ, ಪಡ್ಡೆ ಹುಡುಗರ ಬಿಸಿ ಏರಿಸಿದ್ದಾರೆ. ಬಿಳಿ ಟಾಪ್‌ನಲ್ಲಿ ಗುಲಾಬಿ ಹಿಡಿದು ಫೋಸ್ ಕೊಟ್ಟಿರುವ ನಟಿ ಆಕರ್ಷಕ ಮೂರು ಫೋಟೊಗಳನ್ನು ಹಂಚಿಕೊಂಡಿದ್ದಾರೆ.
ಪೂಜಾ ಹೆಗ್ಡೆ ಪ್ರಭಾಸ್ ಅಭಿನಯದ ಬಹು ನಿರೀಕ್ಷಿತ ರೋಮ್ಯಾಂಟಿಕ್ ಚಿತ್ರವಾಗಿರುವ ‘ರಾಧೆ ಶ್ಯಾಮ್’ 2022 ರ ಜನವರಿ 14 ಕ್ಕೆ ಬಿಡುಗಡೆಯಾಗಲು ಸಿದ್ದವಾಗಿದೆ. ಉಳಿದಂತೆ ತೆಲುಗಿನ ‘ಮೋಸ್ಟ್ ಎಲಿಜಿಬಲ್ ಬ್ಯಾಚಲರ್’, ‘ಆಚಾರ್ಯ್’, ‘ಸರ್ಕಸ್’ ಹಾಗೂ ‘ಬೀಸ್ಟ್’ ಸಿನಿಮಾಗಳಲ್ಲಿ ಸದ್ಯಕ್ಕೆ ಪೂಜಾ ತೊಡಗಿಸಿಕೊಂಡಿದ್ದಾರೆ.