LATEST NEWS
ಎಲೆಕ್ಟ್ರಿಕ್ ವಾಹನಕ್ಕೆ Pollution Certificate ಕೇಳಿದ ಪೊಲೀಸ್….!!
ಕೇರಳ : ಎಲೆಕ್ಟ್ರಿಕ್ ವಾಹನ pollution Certificate ಕೇಳಿ ಇಲ್ಲದಕ್ಕೆ ಟ್ರಾಫಿಕ್ ಪೊಲೀಸರು ದಂಡ ಹಾಕಿರುವ ವಿಲಕ್ಷಣ ಘಟನೆ ಕೇರಳದಲ್ಲಿ ನಡೆದಿದೆ.
ಕೇರಳದ ಮಣಪ್ಪುರಂ ಜಿಲ್ಲೆಯ ನೀಲಾಂಚರಿಯಲ್ಲಿ ಯುವಕನೊಬ್ಬ ‘ಏಥರ್’ ಕಂಪನಿಯ ತನ್ನ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ತೆಗೆದುಕೊಂಡು ಹೋಗುತ್ತಿದ್ದಾಗ ಸ್ಥಳೀಯ ಟ್ರಾಫಿಕ್ ಪೊಲೀಸರು ತಡೆದು ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ನಡೆಸಿದ ಬಳಿಕ ₹250 ದಂಡ ವಿಧಿಸಿ ರಶೀದಿ ಕೊಟ್ಟಾಗ ಯುವಕ ಹೌಹಾರಿದ್ದಾನೆ. ಪರಿಶೀಲನೆ ವೇಳೆ ಪಿಯುಸಿ ಪ್ರಮಾಣಪತ್ರ ನೀಡಿಲ್ಲ ಎಂದು ಟ್ರಾಫಿಕ್ ಪೊಲೀಸರು ದಂಢ ವಿಧಿಸಿದ್ದಾರೆ.
ಯುವಕನಿಗೂ ಕೂಡ ಮನೆಗೆ ಬಂದು ರಶೀದಿ ನೋಡಿದಾಗ ಪೊಲೀಸರ ಪ್ರಮಾದ ಗೊತ್ತಾಗಿದೆ. ಯುವಕ ಇದೇ ರಶೀದಿಯನ್ನು ಟ್ವಿಟರ್‌ನಲ್ಲಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಟ್ಯಾಗ್ ಮಾಡಿ, ‘ಸ್ವಾಮಿ, ಎಲೆಕ್ಟ್ರಿಕ್ ವಾಹನಗಳಿಗೆ ಪಿಯುಸಿ ಪ್ರಮಾಣಪತ್ರ ಕಡ್ಡಾಯ ಮಾಡಿರುವಿರಾ ಹೇಗೆ?‘ ಎಂದು ಪ್ರಶ್ನಿಸಿದ್ದಾನೆ.
ಇನ್ನು ಕೇರಳ ಟ್ರಾಫಿಕ್ ಪೊಲೀಸರ ಈ ಎಡವಟ್ಟನ್ನು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.