DAKSHINA KANNADA
ಕರ್ನಾಟಕ ವಿಧಾನಸಭಾ ಚುನಾವಣೆ – ಬಿರುಸಿನ ಮತದಾನ ಉಡುಪಿಯಲ್ಲಿ ಶೇಕಡ 30.26 ರಷ್ಟು ಮತದಾನ

ಮಂಗಳೂರು, ಮೇ 10: ಕರ್ನಾಟಕ ವಿಧಾನ ಸಬಾ ಚುನಾವಣೆ 2023ರ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ರಾಜ್ಯದ 224 ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ಬಿರುಸಿನಿಂದ ನಡೆಯುತ್ತಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣಕನ್ನಡ, ಉಡುಪಿ ಬೆಳಗ್ಗೆ11 ಗಂಟೆವರೆಗೆ ಕ್ರಮವಾಗಿ ಶೇ.28.16 ಮತ್ತು 30.26%ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಬುಧವಾರ ಮಾಹಿತಿ ನೀಡಿದೆ.
ಬೈಂದೂರು – 27.06%, ಕುಂದಾಪುರ – 32.14%, ಉಡುಪಿ – 29.44%, ಕಾಪು – 28.5% ಕಾರ್ಕಳ – 32.7% ರಷ್ಟು ಮತದಾನವಾಗಿದೆ.

ಬೆಳ್ತಂಗಡಿ 28.89%, ಮಂಗಳೂರು 26.54%, ಮಂಗಳೂರು ಉತ್ತರ 27.31%, ಮಂಗಳೂರು ದಕ್ಷಿಣ 25.57%, ಮೂಡುಬಿದಿರೆ,27.52% ಬಂಟ್ವಾಳ29.51% , ಸುಳ್ಯ 30.52% ಪುತ್ತೂರು29.79% ರಷ್ಟು ಮತದಾನವಾಗಿದೆ