Connect with us

    LATEST NEWS

    ಯಕ್ಷಗಾನದ ಮೇಲೂ ರಾಜಕೀಯ ವೈಷಮ್ಯ – ಪುಟಾಣಿ ಮಕ್ಕಳ ಯಕ್ಷಗಾನ ಅರ್ಧಕ್ಕೆ ನಿಲ್ಲಿಸಿದ ಪೊಲೀಸರು

    ಕುಂದಾಪುರ ನವೆಂಬರ್ 05: ಪುಟಾಣಿ ಮಕ್ಕಳ ಯಕ್ಷಗಾನವನ್ನು ಕ್ಷುಲ್ಲಕ ರಾಜಕಾರಣಕ್ಕೆ ಅರ್ಧಕ್ಕೆ ನಿಲ್ಲಿಸಿದ ಘಟನೆ ಕುಂದಾಪುರ ತಾಲೂಕಿನ ಹೇರಿಕುದ್ರುವಿನಲ್ಲಿ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.


    ಕರಾವಳಿಯ ಗಂಡುಕಲೆ ಎಂದೇ ಕರೆಯಲ್ಪಡು ಯಕ್ಷಗಾನದ ವಿಚಾರದಲ್ಲೂ ಇದೀಗ ರಾಜಕೀಯ ಮಾಡಲು ಪ್ರಾರಂಭವಾಗಿದ್ದು, ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯಿಂದ ಮಕ್ಕಳ ಯಕ್ಷಗಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕುಂದಾಪುರ ಪೊಲೀಸ್ ಠಾಣೆಗೆ ಆನೆಗಳ್ಳಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಉದಯ ಪೂಜಾರಿ ದೂರು ನೀಡಿದ್ದರು. ದೂರಿನ ಹಿನ್ನಲೆ ಪೊಲೀಸರು ಮಕ್ಕಳ ಯಕ್ಷಗಾನವನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ.


    ಮಹಾಬಲ ಹೇರಿಕುದ್ರು ಎಂಬವರು ಸುಮಾರು ಐದು ವರ್ಷಗಳಿಂದ ಸ್ಥಳೀಯ ಹವ್ಯಾಸಿ ತಂಡಗಳ ಪ್ರೋತ್ಸಾಹಕ್ಕಾಗಿ ನವೆಂಬರ್ ತಿಂಗಳಲ್ಲಿ 10 ದಿವಸ ದಿನಕ್ಕೊಂದರಂತೆ ಹತ್ತು ತಂಡಗಳ ಯಕ್ಷಗಾನ ಮಾಡಿಕೊಂಡು ಬರುತ್ತಿದ್ದಾರೆ. ಅದರ ಭಾಗವಾಗಿ ಶನಿವಾರ 15 ವರ್ಷಗಳ ಒಳಗಿನ ಮಕ್ಕಳಿಂದ ಪ್ರಸಂಗವೊಂದರ ಪ್ರದರ್ಶನ ಹಮ್ಮಿಕೊಂಡಿದ್ದು, ಅದನ್ನು ಆನಗಳ್ಳಿ ಗ್ರಾಮ ಪಂಚಾಯತ್ ಸದಸ್ಯ ಎಚ್. ಉದಯ ಪೂಜಾರಿ ಎಂಬವರ ದೂರಿನ ಮೇರೆಗೆ ಪೊಲೀಸರು ಯಕ್ಷಗಾನ ಪ್ರದರ್ಶನಕ್ಕೆ ತಡೆಯೊಡ್ಡಿದ್ದು, ಅನಿವಾರ್ಯವಾಗಿ ಪ್ರಸಂಗವನ್ನು ಇಲ್ಲಿಗೇ ನಿಲ್ಲಿಸಲಾಗುತ್ತಿದೆ ಎಂದು ಹೇಳಿ ಆಯೋಜಕರು ಯಕ್ಷಗಾನ ಪ್ರದರ್ಶನ ಮೊಟಕುಗೊಳಿಸಿದ್ದರು.


    ರಾಜಕೀಯ ಪ್ರೇರಿತವಾಗಿ ಯಕ್ಷಗಾನ ನಿಲ್ಲಿಸುವ ಯತ್ನ ನಡೆಯುತ್ತಿರುವ ಕುರಿತು ಆಯೋಜಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣ ಕುರಿತ ವಿಡಿಯೋ ವೈರಲ್ ಆಗಿದ್ದು, ಯಕ್ಷಗಾನವನ್ನು ನಿಲ್ಲಿಸಿದ ಬಗ್ಗೆ ಕಲಾಭಿಮಾನಿಗಳಿಂತ ತೀವ್ರ ಅಸಮಾಧಾನ ವ್ಯಕ್ತವಾಗಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *