BANTWAL
ನೂತನ ಸರಕಾರ ರಚನೆ ಸಂಭ್ರಮಾಚರಣೆ – ಹೊಡೆದಾಡಿಕೊಂಡ ಯುವಕರು
ನೂತನ ಸರಕಾರ ರಚನೆ ಸಂಭ್ರಮಾಚರಣೆ – ಹೊಡೆದಾಡಿಕೊಂಡ ಯುವಕರು
ಮಂಗಳೂರು ಮೇ 19: ನೂತನ ಸಮ್ಮಿಶ್ರ ಸರಕಾರ ರಚನೆ ಹಿನ್ನಲೆ ನಡೆದ ಸಂಭ್ರಮಾಚರಣೆಯಲ್ಲಿ ಎರಡು ಕೋಮಿನ ನಡುವೆ ಘರ್ಷಣೆ ನಡೆದ ಘಟನೆ ನಡೆದಿದೆ.
ರಾಜ್ಯ ವಿಧಾನಸೌಧದಲ್ಲಿ ಇಂದು ಬಿಜೆಪಿ ಮುಖ್ಯಮಂತ್ರಿ ಯಡಿಯೂರಪ್ಪ ವಿಶ್ವಾಸಮತ ಗೆಲ್ಲಲಾಗದೇ ರಾಜೀನಾಮೆ ನೀಡಿದ ಹಿನ್ನಲೆಯಲ್ಲಿ , ರಾಜ್ಯದಲ್ಲಿ ಕಾಂಗ್ರೇಸ್ ಹಾಗೂ ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರಕಾರ ಅಸ್ತಿತ್ವಕ್ಕೆ ಬಂದಿದೆ. ಈ ಹಿನ್ನಲೆಯಲ್ಲಿ ಕೇರಳದ ಯುವಕರ ತಂಡವೊಂದು ಬಂಟವಾಳ ತಾಲೂಕಿನ ವಿಟ್ಲದ ಕನ್ಯಾನದಲ್ಲಿ ಸಂಭ್ರಮಾಚರಣೆ ನಡೆಸಿದ್ದಾರೆ.
ಈ ಸಂಭ್ರಮಾಚರಣೆಯ ಸಂದರ್ಭದಲ್ಲಿ ಯುವಕರು ಹಿಂದೂ ವಿರೋಧಿ ಘೋಷಣೆ ಕೂಗಿದ್ದರು, ಇದಕ್ಕೆ ಸ್ಥಳೀಯ ಯುವಕರು ಆಕ್ಷೇಪ ವ್ಯಕ್ತಪಡಿಸಿದಾಗ, ಕೇರಳದ ಯುವಕರು ಹಾಗೂ ಸ್ಥಳೀಯ ಯುವಕರ ನಡುವೆ ಘರ್ಷಣೆ ನಡೆದಿದೆ. ನಡು ರಸ್ತೆಯಲ್ಲಿ ಯೇ ಪರಸ್ಪರ ಬಾಟಲ್ ದೊಣ್ಣೆಗಳಿಂದ ಯುವಕರು ಹೊಡೆದಾಡಿಕೊಂಡಿದ್ದಾರೆ.ಸ್ಥಳಕ್ಕೆ ಆಗಮಿಸಿದ ಪೊಲೀಸರು ಲಾಠಿ ಚಾರ್ಜ್ ಮಾಡಿ ಯುವಕರನ್ನು ಚದುರಿಸಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ದಕ್ಷಿಣಕನ್ನಡ ಅಡೀಷನಲ್ ಎಸ್ಪಿ ಸಜಿತ್ ಸೇರಿದಂತೆ ಹಿರಿಯ ಅಧಿಕಾರಿಗಳ ಭೇಟಿ ನೀಡಿದ್ದಾರೆ.