FILM
ಬೆಟ್ಟಿಂಗ್ ಆ್ಯಪ್ ಜಾಹಿರಾತು ಮಾಡಿದ ನಟ ನಟಿಯರ ಮೇಲೆ ಎಫ್ಐಆರ್

ನವದೆಹಲಿ ಮಾರ್ಚ್ 20: ಬೆಟ್ಟಿಂಗ್ ಆ್ಯಪ್ ಜಾಹಿರಾತುಗಳಲ್ಲಿ ಕಾಣಿಸಿಕೊಂಡು ಅದರ ಪ್ರಚಾರ ಮಾಡಿದ ಆರೋಪದ ಮೇಲೆ ನಟ ರಾಣಾ ದಗ್ಗುಬಾಟಿ, ಪ್ರಕಾಶ್ ರಾಜ್, ವಿಜಯ್ ದೇವರಕೊಂಡ, ನಟಿಯರಾದ ಮಂಚು ಲಕ್ಷ್ಮಿ, ಪ್ರಣೀತಾ ಸೇರಿದಂತೆ 25 ಮಂದಿ ವಿರುದ್ಧ ತೆಲಂಗಾಣ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಹೈದರಾಬಾದ್‌ನ ಮಿಯಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ . ರಾಣಾ ದಗ್ಗುಬಾಟಿ ಮತ್ತು ಪ್ರಕಾಶ್ ರಾಜ್ ಅವರು ಜಂಗ್ಲಿ ರಮ್ಮಿ, ವಿಜಯ್ ದೇವರಕೊಂಡ ಅವರು A23, ಮಂಚು ಲಕ್ಷ್ಮಿ ಯೊಲೊ247, ಪ್ರಣೀತಾ ಪೈರ್‌ಪ್ಲೇ ಮತ್ತು ನಿಧಿ ಅಗರ್ವಾಲ್ ಜೀತ್ ವಿನ್ ಎನ್ನುವ ಬೆಟ್ಟಿಂಗ್ ಆ್ಯಪ್‌ಗಳ ಪ್ರಚಾರದಲ್ಲಿ ಪಾಲ್ಗೊಂಡಿದ್ದಾರೆ. ಇನ್ನೂ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತನ್ನು ನೀಡುವ ಮೂಲಕ ಪ್ರಚಾರ ಮಾಡುತ್ತಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

32 ವರ್ಷದ ಫಣೀಂದ್ರ ಶರ್ಮಾ ಎನ್ನುವ ಉದ್ಯಮಿಯೊಬ್ಬರು ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿದೆ ಎಂದು ಎಎನ್‌ಐ ವರದಿ ತಿಳಿಸಿದೆ. ನಟ, ನಟಿಯರಲ್ಲದೆ ಸಾಮಾಜಿಕ ಜಾಲತಾಣಗಳ ಇನ್ನು ಯೆನ್ಸರ್‌ಗಳಾದ ಅನನ್ಯಾ, ಶ್ರೀಮುಖಿ, ವರ್ಷಿಣಿ, ಸನ್ನಿ ಯಾದವ್ ಸೇರಿದಂತೆ ಹಲವರ ವಿರುದ್ಧವೂ ಪ್ರಕರಣ ದಾಖಲಾಗಿದೆ.
2 Comments