Connect with us

BANTWAL

ಪೊಲೀಸರಲ್ಲೂ ಮೂಡಿದೆ ಕೊರೊನಾ ಭೀತಿ

ಪೊಲೀಸರಲ್ಲೂ ಮೂಡಿದೆ ಕೊರೊನಾ ಭೀತಿ

ಪುತ್ತೂರು ಮಾರ್ಚ್ 28: ಬೆಳ್ತಂಗಡಿ ಯುವಕನಲ್ಲಿ ಕೊರೊನಾ ಸೊಂಕು ಪತ್ತೆಯಾದ ಹಿನ್ನಲೆ ಈಗ ಪೋಲೀಸರಲ್ಲೂ ಕೊರೊನಾ ಭೀತಿ ಮೂಡಿದೆ.

ಬೆಳ್ತಂಗಡಿಯ ಕರಾಯ ನಿವಾಸಿಯಾಗಿರುವ ಯುವಕನಿಗೆ ನಿನ್ನೆ ಕೊರೊನಾ ಸೊಂಕು ಇರುವ ಬಗ್ಗೆ ಪರೀಕ್ಷೆಗಳಿಂದ ದೃಢಪಟ್ಟಿದೆ. ಈ ಹಿನ್ನಲೆ ಈ ಯುವಕನ ಟ್ರಾವೆಲ್ ಹಿಸ್ಟರಿ ಈಗ ಬಿಡುಗಡೆಯಾಗಿದ್ದು, ಕೊರೊನ ಸೊಂಕಿತ ಯುವಕ ದಿನಾಂಕ 21.03.2020 ಬೆಂಗಳೂರಿನಿಂದ ಮಂಗಳೂರಿಗೆ ಕೆಎಸ್ ಆರ್ ಟಿಸಿ ಬಸ್ KA19F 3329 ರಲ್ಲಿ ಪ್ರಯಾಣಿಸಿದ್ದ. ಅಲ್ಲದೆ ಬಳಿಕ ಉಪ್ಪಿನಂಗಡಿ ಪೋಲೀಸ್ ಠಾಣೆಗೂ ಭೇಟಿ‌ ಕೊಟ್ಟಿದ್ದ ಎಂದು ಹೇಳಲಾಗಿದೆ.

ಈ ಹಿನ್ನಲೆ ಉಪ್ಪಿನಂಗಡಿ ಪೋಲೀಸ್ ಠಾಣಾ ಸಿಬ್ಬಂದಿಗಳಲ್ಲೂ ಕೊರೊನಾ ಭೀತಿ ಉಂಟಾಗಿದೆ. ಅಲ್ಲದೆ ಕೊರೊನಾ ಸೊಂಕಿತ ಯುವಕನೊಂದಿಗೆ ಕೆಎಸ್ಆರ್ ಟಿಸಿ ಬಸ್ ನಲ್ಲಿ ಪ್ರಯಾಣಿಸಿದ್ದ ಇತರ ಪ್ರಯಾಣಿಕರು ಈ ಕೂಡಲೇ ಜಿಲ್ಲಾಸ್ಪತ್ರೆ ಭೇಟಿ ನೀಡಿ ಆರೋಗ್ಯ ತಪಾಸಣೆ ನಡೆಸಬೇಕೆಂದು ಜಿಲ್ಲಾಡಳಿತ ಮನವಿ ಮಾಡಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *