LATEST NEWS
ಪೊಲೀಸ್ ಇಲಾಖೆ ಹುದ್ದೆ- ಮೌಖಿಕ ಪರೀಕ್ಷೆಗೆ ಹಾಜರಾಗುವ ಬಗ್ಗೆ

ಪೊಲೀಸ್ ಇಲಾಖೆ ಹುದ್ದೆ- ಮೌಖಿಕ ಪರೀಕ್ಷೆಗೆ ಹಾಜರಾಗುವ ಬಗ್ಗೆ
ಉಡುಪಿ ಫೆಬ್ರವರಿ 5: ವಿಶೇಷ ಆರ್‍ಎಸ್‍ಐ(ಕೆಎಸ್‍ಆರ್ ಪಿ) (ಪುರುಷ)-28, ಸಬ್-ಇನ್‍ಪೆಕ್ಟರ್ (ಕೆಎಸ್‍ಐಎಸ್‍ಎಫ್)-17 ಮತ್ತು ಪಿಎಸ್‍ಐ(ಎಫ್‍ಪಿಬಿ) (ಪುರುಷ ಮತ್ತು ಮಹಿಳಾ)-05 ಹಾಗೂ ಸೇವಾನಿರತ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಉಲ್ಲೇಖಿತ ಅಧಿಸೂಚನೆಗಳನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಿ ನೇಮಕಾತಿ ಪ್ರಕ್ರಿಯೆಯನ್ನು ಕೈಗೊಳ್ಳಲಾಗಿರುತ್ತದೆ.
ಈಗಾಗಲೇ ಅರ್ಹ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಗಳನ್ನು ನಡೆಸಲಾಗಿದ್ದು, ವೃಂದ ಮತ್ತು ನೇಮಕಾತಿ ನಿಯಮದನ್ವಯ ಮುಂದಿನ ಹಂತವಾದ ಮೌಖಿಕ ಪರೀಕ್ಷೆ ನಡೆಸಬೇಕಿದ್ದು, ಒಟ್ಟು 50 ಹುದ್ದೆಗಳಿಗೆ 1:2ರ ಅನುಪಾತದಂತೆ 100 ಅಭ್ಯರ್ಥಿಗಳಿಗೆ ಮೌಖಿಕ ಪರೀಕ್ಷೆಯನ್ನು ನಡೆಸಲಾಗುವುದು.

ಅಡಿಷನಲ್ ಡೈರೆಕ್ಟರ್ ಜನರಲ್ ಆಫ್ ಪೊಲೀಸ್, ನೇಮಕಾತಿ, ಕಾರ್ಲಟನ್ ಭವನ, ಅರಮನೆ ರಸ್ತೆ, ಬೆಂಗಳುರು ಇವರ ಕಚೇರಿಯಲ್ಲಿ ಒಟ್ಟು 100 ಅಭ್ಯರ್ಥಿಗಳಿಗೆ ಮೌಖಿಕ ಪರೀಕ್ಷೆಯನ್ನು ಫೆಬ್ರವರಿ 8,9,14 ಮತ್ತು 15 ರಂದು ಪ್ರತಿ ದಿನ 25 ಅಭ್ಯರ್ಥಿಗಳಂತೆ ನಡೆಸಲು ತೀರ್ಮಾನಿಸಲಾಗಿದ್ದು, ಮೌಖಿಕ ಪರೀಕ್ಷೆಗೆ ಅರ್ಹರಾಗಿರುವ ಅಭ್ಯರ್ಥಿಗಳ ಕರೆ ಪತ್ರಗಳನ್ನು ಫೆಬ್ರವರಿ 6 ರಂದು ಇಲಾಖೆಯ ಅಧಿಕೃತ ವೆಬ್‍ಸೈಟ್ www.ksp.gov.in ನಿಂದ ಪಡೆದುಕೊಂಡು ನಿಗದಿತ ದಿನಾಂಕದಂದು ಮೌಖಿಕ ಪರೀಕ್ಷೆಗೆ ಹಾಜರಾಗಲು ಸೂಚಿಸಲಾಗಿದೆ ಎಂದು ಅಡಿಷನಲ್ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಇವರ ಪ್ರಕಟಣೆ ತಿಳಿಸಿದೆ.