LATEST NEWS
ಅಪ್ಪನಿಗೆ ಕೊಲೆ ಬೆದರಿಕೆ ಹಾಕಿದ್ರಾ ಚೈತ್ರಾ ಕುಂದಾಪುರ – ಚೈತ್ರಾ ಕುಂದಾಪುರ ವಿರುದ್ಧ ಪೊಲೀಸ್ ದೂರು ಕೊಟ್ಟ ತಂದೆ ಬಾಲಕೃಷ್ಣ ನಾಯಕ್

ಉಡುಪಿ ಮೇ 23: ಬಿಗ್ ಬಾಸ್ ಸ್ಪರ್ಧಿ ಚೈತ್ರಾ ಕುಂದಾಪುರ ಕುಂದಾಪುರ ಕುಟುಂಬ ಕಲಹ ಇದೀಗ ಬೀದಿಗೆ ಬಂದಿದೆ. ಇತ್ತಿಚೆಗಷ್ಟೇ ಮದುವೆಯಾಗಿದ್ದ ಚೈತ್ರಾ ಕುಂದಾಪುರ ವಿರುದ್ದ ಇದೀಗ ಆಕೆಯ ತಂದೆ ಬಾಲಕೃಷ್ಣ ನಾಯಕ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ನನ್ನನ್ನು ಕೊಲೆ ಮಾಡಿಸಲು ಸುಪಾರಿ ನೀಡುವುದಾಗಿ ಚೈತ್ರಾ ಕುಂದಾಪುರ ಬೆದರಿಕೆ ಹಾಕಿದ್ದಾರಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇತ್ತೀಚೆಗಷ್ಟೇ ಮದುವೆಯಾದ ಬಿಗ್ ಬಾಸ್ ಸ್ಪರ್ಧಿ ಚೈತ್ರಾ, ಮದುವೆ ಬಳಿಕ ಅವರ ಕುಟುಂಬ ಕಲಹ ಬೀದಿಗೆ ಬಂದಿದೆ. ಚೈತ್ರಾ ವಿರುದ್ದ ಅವರ ತಂದೆ ಬಾಲಕೃಷ್ಣ ನಾಯಕ್ ಬಹಿರಂಗವಾಗಿಯೇ ಅಸಮಧಾನ ಹೊರಹಾಕಿದ್ದರು, ‘’ಚೈತ್ರಾ ಕುಂದಾಪುರ ಕಳ್ಳಿ.. ಅವಳು ಮದುವೆಯಾಗಿರುವ ಶ್ರೀಕಾಂತ್ ಸಹ ಕಳ್ಳ’’ ಎಂದು ಮಾಧ್ಯಮಗಳ ಮುಂದೆ ಬಾಲಕೃಷ್ಣ ನಾಯಕ್ ಬೆಟ್ಟು ಮಾಡಿ ತೋರಿಸಿದ್ದರು.

ಇದೀಗ ಮಗಳು ಚೈತ್ರಾ ಕುಂದಾಪುರ, ಪತ್ನಿ ರೋಹಿಣಿ ವಿರುದ್ಧ ಬಾಲಕೃಷ್ಣ ನಾಯಕ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ‘’ಆಸ್ತಿಗಾಗಿ ಚೈತ್ರಾ ಕುಂದಾಪುರ ಬೆದರಿಕೆ ಹಾಕಿದ್ದಾಳೆ. ಆಕೆಗೆ ಭೂಗತ ದೊರೆಗಳ ಸಂಪರ್ಕವಿದ್ದು, ಯಾವುದೇ ಹೇಯ ಕೃತ್ಯ ಮಾಡಲು ಹೇಸುವವಳಲ್ಲ’’ ಎಂದು ಮಗಳ ವಿರುದ್ಧ ತಂದೆ ಬಾಲಕೃಷ್ಣ ನಾಯಕ್ ದೂರು
‘’ನನ್ನ ಮಗಳು ಆಕೆಯ ಸ್ನೇಹಿತನಾದ ಶ್ರೀಕಾಂತ್ ಈತನನ್ನು ಮದುವೆಯಾಗಲು ನಿರ್ಧರಿಸಿದ ವಿಷಯ ತಿಳಿಯಿತು. ಆಗ ನಾನು ಅವಳ ಬಳಿ ಆತನನ್ನು ಮದುವೆ ಆಗುವುದು ಸರಿಯಲ್ಲ, ಆತನು ಸರಿಯಿಲ್ಲ ಎಂದು ಹೇಳಿದಾಗ ನನ್ನ ಮಗಳು ಚೈತ್ರ ಹಾಗೂ ನನ್ನ ಹೆಂಡತಿ ರೋಹಿಣಿ ಇವರುಗಳು ಸೇರಿ ನನ್ನ ಬಳಿ ಒಂದು ವೇಳೆ ಆತನನ್ನು ಬಿಟ್ಟು ಬೇರೆ ಹುಡುಗನನ್ನು ಮದುವೆಯಾಗುವುದಾದರೆ ನನಗೆ ರೂ.5,00,000/- ನಗದು ನೀಡಬೇಕೆಂದು ಒತ್ತಡ ಹೇರಿದರು ಹಾಗೂ ಆ ಮದುವೆಗೆ ಒಪ್ಪದೇ ಇದಲ್ಲಿ ನನ್ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾಳೆ. ಅದಕ್ಕೆ ನಾನು ಒಪ್ಪಲಿಲ್ಲ’’ ಎಂದು ದೂರಿನಲ್ಲಿ ಬಾಲಕೃಷ್ಣ ನಾಯಕ್ ಬರೆದಿದ್ದಾರೆ.
‘’ಆಕೆಯ ಮದುವೆಯು ಶ್ರೀಕಾಂತ್‌ನೊಂದಿಗೆ ನಿಶ್ಚಯವಾಗಿ ಮದುವೆಗೆ ನಾನು ಬಾರದೇ ಇದ್ದಲ್ಲಿ ನನ್ನನ್ನು ಹಾಗೂ ನನ್ನ ಹಿರಿಯ ಮಗಳು ಗಾಯತ್ರಿಯನ್ನು ಭೂಗತ ದೊರೆಗಳಿಗೆ ಸುಪಾರಿ ನೀಡಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾಳೆ’’ ಎಂದು ಚೈತ್ರಾ ಕುಂದಾಪುರ ವಿರುದ್ಧ ತಂದೆ ಬಾಲಕೃಷ್ಣ ನಾಯಕ್ ದೂರಿದ್ದಾರೆ.