Connect with us

LATEST NEWS

ಧಾರ್ಮಿಕ ಕೇಂದ್ರಗಳಲ್ಲಿ ದುಷ್ಕರ್ಮಿಗಳ ವಿಕೃತಿ – ಪೊಲೀಸ್ ಆಯುಕ್ತರಿಂದ ಪರಿಶೀಲನೆ

ಮಂಗಳೂರು ಜನವರಿ 20: ಕಿಡಿಗೇಡಿಗಳು ವಿಕೃತಿ ಮೆರೆದ ಉಳ್ಳಾಲದ ಕೊರಗಜ್ಜ, ಗುಳಿಗಜ್ಜನ ಕಟ್ಟೆ ಮತ್ತು ಕೊಣಾಜೆ ಮುಲಾರದ ಗೋಪಾಲಕೃಷ್ಣ ಭಜನಾ ಮಂದಿರಗಳಿಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.


ಮಂಗಳೂರಿನ ಹೊರವಲಯದ ಉಳ್ಳಾಲದ ಕೊರಗಜ್ಜ, ಗುಳಿಗಜ್ಜನ ಕಟ್ಟೆಯ ಹುಂಡಿಗೆ ಕಿಡಿಗೇಡಿಗಳು ಕಾಂಡೋಮ್ ಮತ್ತು ರಾಜಕೀಯ ಪಕ್ಷದ ಕರಪತ್ರದಲ್ಲಿ ಉದ್ರೇಕಿತ ಬರಹವುಳ್ಳ ಭಿತ್ತಿ ಪತ್ರವೊಂದನ್ನು ಹಾಕಿದ್ದರು. ಅಲ್ಲದೆ ಕೊಣಾಜೆಯ ಮುಲಾರದ ಗೋಪಾಲಕೃಷ್ಣ ಭಜನಾ ಮಂದಿರದಲ್ಲಿ ಭಗವಾ ಧ್ವಜದ ಮೇಲೆ ಮಲಮೂತ್ರ ವಿಸರ್ಜನೆ ಮಾಡಿ ವಿಕೃತಿ ಮರೆದಿದ್ದರು.


ಈ ಹಿನ್ನಲೆ ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಘಟನೆ ನಡೆದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು  ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಕೆಲಸ ಸಲ್ಲದು. ಈ ಹಿಂದೆಯೂ ನಗರದಲ್ಲಿ ಈ ರೀತಿಯ ಎರಡು ಘಟನೆ ನಡೆದಿದೆ. ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡುತ್ತಿರುವ ಕಿಡಿಗೇಡಿಗಳ ವಿರುದ್ದ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಕೊಣಾಜೆಯಲ್ಲೂ ಇದೇ ರೀತಿ ಘಟನೆ ನಡೆದಿದ್ದು ಡಿಸಿಪಿ ಹರಿರಾಂ ಶಂಕರ್ ಮತ್ತು ಎಸಿಪಿ ರಂಜಿತ್ ಬಂಡಾರು ನೇತೃತ್ವದ ವಿಶೇಷ ತಂಡ ಆದಷ್ಟು ಬೇಗನೆ ಕಿಡಿಗೇಡಿಗಳ ಪತ್ತೆ ಹಚ್ಚುವ ಕಾರ್ಯ ನಡೆಸುತ್ತದೆ. ಧಾರ್ಮಿಕ ಕ್ಷೇತ್ರದವರು ಎಲ್ಲರೂ ಸಿಸಿಟಿವಿ ಅಳವಡಿಸಲು ಸಲಹೆ ನೀಡಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *