LATEST NEWS
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಆದೇಶ ನಂಬಿ ನಡುರಸ್ತೆಯಲ್ಲಿ ನಿಂತ ಘನವಾಹನಗಳು
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಆದೇಶ ನಂಬಿ ನಡುರಸ್ತೆಯಲ್ಲಿ ನಿಂತ ಘನವಾಹನಗಳು
ಮಂಗಳೂರು ನವೆಂಬರ್ 13: ಶಿರಾಢಿ ಘಾಟ್ ವಿಚಾರದಲ್ಲಿ ದಕ್ಷಿಣಕನ್ನಡ ಹಾಗೂ ಹಾಸನ ಜಿಲ್ಲಾಧಿಕಾರಿಗಳ ಆದೇಶಗಳು ವಾಹನ ಸವಾರರಿಗೆ ಸಂಕಷ್ಟವನ್ನು ಉಂಟು ಮಾಡುತ್ತಿದೆ.
ಈ ಹಿಂದೆಯೂ ಎರಡೂ ಜಿಲ್ಲೆಗಳ ಜಿಲ್ಲಾಧಿಕಾರಿಗಳ ದ್ವಂದ್ವ ಆದೇಶದಿಂದಾಗಿ ವಾಹನ ಸವಾರರು ಕಷ್ಟ ಅನುಭಿಸಿದ್ದಾರೆ. ಈಗ ಮತ್ತೆ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಆದೇಶದಿಂದ ಘನ ವಾಹನಸವಾರರು ಸಂಕಷ್ಟಪಡುತ್ತಿದ್ದಾರೆ.
ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಘಾಟ್ ರಸ್ತೆಯಲ್ಲಿ ಘನ ವಾಹನಗಳಿಗೆ ನವೆಂಬರ್ 12 ರಿಂದ ಸಂಚಾರಕ್ಕೆ ಅನುವು ಮಾಡಿ ಕೊಡಲಾಗುತ್ತದೆ ಎಂಬ ದಕ್ಷಿಣಕನ್ನಡ ಜಿಲ್ಲಾಡಳಿತವು ಘೋಷಿಸಿದ್ದನ್ನು ನಂಬಿ ನೂರಾರು ಲಾರಿಗಳ ಚಾಲಕರು ಸಂಕಷ್ಟಕ್ಕೆ ಸಿಲುಕಿದ ಘಟನೆ ಎರಡು ದಿನಗಳಿಂದ ಗುಂಡ್ಯದಲ್ಲಿ ನಡೆದಿದೆ.
ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ನವಂಬರ್ 12 ರಿಂದ ಎಲ್ಲಾ ತರಹದ ವಾಹನಗಳನ್ನು ಘಾಟ್ ರಸ್ತೆಯ ಮೂಲಕ ಬಿಡಲಾಗುವುದು ಎನ್ನುವ ಮಾಹಿತಿಯನ್ನು ನೀಡಿದ್ದರು. ಆದರೆ ಪೋಲೀಸರಿಗೆ ಯಾವುದೇ ಆದೇಶ ಬಾರದ ಹಿನ್ನಲೆಯಲ್ಲಿ ಘನ ವಾಹನಗಳ ಸಂಚಾರಕ್ಕೆ ಪೋಲೀಸರು ತಡೆಯೊಡ್ಡಿದ್ದಾರೆ.
ಜಿಲ್ಲಾಡಳಿತ ಮಾಹಿತಿಯನ್ನು ನಂಬಿ ಘಾಟ್ ರಸ್ತೆಯ ಮೂಲಕ ಸಾಗಲು ಬಂದ ಲಾರಿ ಚಾಲಕರು ಬೇರೆ ದಾರಿಯಿಲ್ಲದೆ ಮತ್ತೆ ಚಾರ್ಮಾಡಿ ರಸ್ತೆಯ ಮೂಲಕವೇ ಸಾಗುವಂತಾಗಿದೆ.