Connect with us

    DAKSHINA KANNADA

    ಗೋಕಳ್ಳರಿಗೆ ಪೋಲೀಸರೇ ಟಾರ್ಗೆಟ್, ವಾಹನದ ವಾರೀಸುದಾರರ ಬಂಧನವೇಕೆ ಲೇಟ್ ?

    ಗೋಕಳ್ಳರಿಗೆ ಪೋಲೀಸರೇ ಟಾರ್ಗೆಟ್, ವಾಹನದ ವಾರೀಸುದಾರರ ಬಂಧನವೇಕೆ ಲೇಟ್ ?

    ಪುತ್ತೂರು,ನವಂಬರ್ 18: ಅಕ್ರಮ ಗೋ ಸಾಗಾಟ ಪ್ರಕರಣಗಳು ಇಂದು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ಕೆಲವೊಮ್ಮೆ ಪೋಲೀಸರು ಈ ಗೋಸಾಗಾಟವನ್ನು ನಿಲ್ಲಿಸಿದರೆ, ಇನ್ನು ಕೆಲವೊಮ್ಮೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಸೇರಿ ಗೋಸಾಗಾಟವನ್ನು ತಡೆಯುವ ಪ್ರಯತ್ನಗಳನ್ನು ಮಾಡುತ್ತಾರೆ. ಆದರೆ ಎಷ್ಟೇ ತಡೆಯುವ ಪ್ರಯತ್ನಗಳಾದರೂ, ಜಿಲ್ಲೆಯಲ್ಲಿ ಮಾತ್ರ ಅಕ್ರಮ ಗೋಸಾಗಾಟ ಹಾಗೂ ಗೋ ಕಳ್ಳತನಗಳು ಮಾತ್ರ ನಿರಂತರವಾಗಿ ನಡೆಯುತ್ತಿದೆ. ಗೋ ಸಾಗಾಟ ಹಾಗೂ ಗೋ ಕಳ್ಳತನವನ್ನು ತಡೆಯಲು ಬಂದವರ ಮೇಲೆ ಮಾರಣಾಂತಿಕ ಹಲ್ಲೆಗಳೂ ನಡೆದಿದೆ. ಪೋಲೀಸರನ್ನೂ ಕೂಡಾ ಬಿಡದಷ್ಟು ಮಟ್ಟಕ್ಕೆ ಈ ಗೋ ಸಾಗಾಟಗಾರರು ಬೆಳೆದಿದ್ದು, ಪೋಲೀಸರ ಮೇಲೆಯೂ ಹಲ್ಲೆ ನಡೆಸುವುದು ಇದೀಗ ಸಾಮಾನ್ಯವಾಗಿದೆ. ನವಂಬರ್ 16 ರಂದು ಕೂಡಾ ಇಂಥಹುದೇ ಒಂದು ಪ್ರಕರಣ ಪುತ್ತೂರು ನಗರ ಪೋಲೀಸ್ ಠಾಣಾ ವ್ಯಾಪ್ತಿಯ ಕೆದಿಲ ಎಂಬಲ್ಲಿ ನಡೆದಿದೆ. ಪಿಕ್ ಅಪ್ ವಾಹನವೊಂದರಲ್ಲಿ 12 ಗೋವುಗಳನ್ನು ಅಮಾನುಷವಾಗಿ ತುಂಬಿಕೊಂಡು ಸಾಗಾಟ ಮಾಡುತ್ತಿದ್ದ ಸಂದರ್ಭದಲ್ಲಿ ಪೋಲೀಸರು ಆ ವಾಹನವನ್ನು ತಡೆಯುವ ಪ್ರಯತ್ನ ನಡೆಸಿದ್ದರು. ಆ ಸಂದರ್ಭದಲ್ಲಿ ಪೋಲೀಸರನ್ನು ಮಚ್ಚು, ಲಾಂಗ್ ಹಾಗೂ ತಲವಾರು ಹಿಡಿದು ಹಲ್ಲೆ ನಡೆಸಲು ಕಳ್ಳರ ತಂಡ ಮುಂದಾಗಿತ್ತು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಘಟನಾ ಸ್ಥಳದಲ್ಲಿದ್ದ ನಗರ ಠಾಣೆಯ ಎಸ್.ಐ. ಅಜಯ್ ಕುಮಾರ್ ತನ್ನ ರಿವಾಲ್ವರ್ ನಿಂದ ಎರಡು ಸುತ್ತು ಗುಂಡು ಹಾರಿಸಿದ್ದಾರೆ. ಈ ಸಂದರ್ಭದಲ್ಲಿ ಗೋ ಕಳ್ಳರು ತಮ್ಮ ವಾಹನವನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದರು. ಪೋಲೀಸರು ಗೋವುಗಳ ಸಹಿತ ಪಿಕ್ ಅಪ್ ವಾಹನವನ್ನೂ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದರು. ಸಾಮಾನ್ಯ ನಾಗರಿಕರನ್ನು ಬಿಟ್ಟು ಇದೀಗ ಪೋಲೀಸರ ಮೇಲೆಯೂ ದಾಳಿ ನಡೆಸುವಷ್ಟು ಮಟ್ಟಕ್ಕೆ ಇದೀಗ ಈ ಗೋ ಕಳ್ಳರು ಬೆಳೆದಿರುವುದು ಇಡೀ ನಾಗರಿಕ ಸಮಾಜದ ಆತಂಕಕ್ಕೂ ಕಾರಣವಾಗಿದೆ. ಕೆದಿಲದಲ್ಲಿ ನಡೆದ ಘಟನೆಯ ಸಂದರ್ಭದಲ್ಲಿ ಒಂದು ವೇಳೆ ಪುತ್ತೂರು ನಗರ ಪೋಲೀಸ್ ಎಸೈ ಅಜಯ್ ಕುಮಾರ್ ಸ್ಥಳದಲ್ಲಿ ಉಪಸ್ಥಿತರಿಲ್ಲದೇ ಹೋಗಿದ್ದರೆ, ಗೋಕಳ್ಳರ ದಾಳಿಗೆ ಸಿಲುಕಿ ಇಬ್ಬರು ಪೋಲೀಸರು ಸಾವನ್ನಪ್ಪುವ ಸಾಧ್ಯತೆಯೂ ಇತ್ತು. ಆದರೆ ಇಷ್ಟೊಂದು ಗಂಭೀರ ಘಟನೆ ನಡೆದಿದ್ದರೂ, ಗೋವುಗಳನ್ನು ಸಾಗಾಟ ಮಾಡುತ್ತಿದ್ದ ವಾಹನ ಯಾರಿಗೆ ಸೇರಿದ್ದು ಎನ್ನುವುದನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ಪೋಲೀಸರು ವಿಳಂಬನೀತಿಯನ್ನು ಅನುಸರಿಸುತ್ತಿರುವುದರ ಹಿಂದೆ ಪೋಲೀಸರಿಗೆ ಬಾಹ್ಯ ಒತ್ತಡಗಳೇನಾದರೂ ಇದೆಯೋ ಎನ್ನುವ ಸಂಶಯಗಳು ನಾಗರಿಕ ಸಮಾಜದಲ್ಲಿ ಮೂಡುತ್ತಿದೆ. ವಾಹನದ ನೊಂದಣಿ ಸಂಖ್ಯೆಯ ಮೂಲಕ ವಾಹನ ಅಸಲೀ ಮಾಲಕ ಅಥವಾ ನಕಲಿ ಮಾಲಕನನ್ನು ವಶಕ್ಕೆ ಪಡೆಯಲು ಪೋಲೀಸರು ಹಿಂದೇಟು ಹಾಕುತ್ತಿರುವುದಕ್ಕೆ ಕಾರಣವೇನು ಎನ್ನುವುದು ಬೆಳಕಿಗೆ ಬರಬೇಕಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *