Connect with us

DAKSHINA KANNADA

ಇಚ್ಲಂಪಾಡಿ ಬಳಿ ಬಸ್ ಹಾಗೂ ಒಮ್ನಿ ನಡುವೆ ಡಿಕ್ಕಿ, ಒರ್ವ ಸಾವು ನಾಲ್ವರು ಗಂಭೀರ

ಇಚ್ಲಂಪಾಡಿ ಬಳಿ ಬಸ್ ಹಾಗೂ ಒಮ್ನಿ ನಡುವೆ ಡಿಕ್ಕಿ, ಒರ್ವ ಸಾವು ನಾಲ್ವರು ಗಂಭೀರ

ಪುತ್ತೂರು,ನವಂಬರ್ 18: ಖಾಸಗಿ ಬಸ್ ಹಾಗೂ ಓಮ್ನಿ ಕಾರು ನಡುವೆ ಢಿಕ್ಕಿ ಸಂಭವಿಸಿ ಓರ್ವ ಮೃತಪಟ್ಟು ನಾಲ್ವರು ಗಂಭೀರ ಗಾಯಗೊಂಡ ಘಟನೆ ಸುಬ್ರಹ್ಮಣ್ಯ – ಧರ್ಮಸ್ಥಳ ರಾಜ್ಯ ಹೆದ್ದಾರಿಯ ಇಚಿಲಂಪಾಡಿ ಎಂಬಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ.
ಬೆಂಗಳೂರಿನಿಂದ ಧರ್ಮಸ್ಥಳ ಮೂಲಕ ಸುಬ್ರಹ್ಮಣ್ಯ ಕ್ಕೆ ತೆರಳುತ್ತಿದ್ದ ಕುಕ್ಕೇಶ್ರೀ ಹೆಸರಿನ ಖಾಸಗಿ ಬಸ್ ಹಾಗೂ ಧರ್ಮಸ್ಥಳ ಕ್ಕೆ ತೆರಳುತ್ತಿದ್ದ ಉಡುಪಿ ಮೂಲದ ಓಮ್ನಿ ಕಾರು ಢಿಕ್ಕಿಯಾಗಿದ್ದು, ಘಟನೆಯಲ್ಲಿ ಕಾರಿನಲ್ಲಿದ್ದ ಓರ್ವ ಮೃತಪಟ್ಟಿದ್ದು, ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. ಮೃತಪಟ್ಟವರನ್ನು ಒಮ್ನಿ ಚಾಲಕ ಕಾರ್ಕಳ ನಿವಾಸಿ ಸುದೇಶ್ (28) ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಢಿಕ್ಕಿಯ ರಭಸಕ್ಕೆ ಬಸ್ ಕಮರಿಗೆ ಉರುಳಿದ್ದು, ಬಸ್ ಚಾಲಕ ಪರಾರಿಯಾಗಿದ್ದಾನೆ.