LATEST NEWS
ಪೊಲೀಸಪ್ಪನ ಅಮಾನವೀಯ ವರ್ತನೆ- ವಿದ್ಯಾರ್ಥಿಗೆ ಪೀಡನೆ
ಪೊಲೀಸಪ್ಪನ ಅಮಾನವೀಯ ವರ್ತನೆ- ವಿದ್ಯಾರ್ಥಿಗೆ ಪೀಡನೆ
ಪುತ್ತೂರು ಸೆಪ್ಟೆಂಬರ್ 22: ಅಸೌಖ್ಯದಿಂದ ಬಳಲುತ್ತಿದ್ದ ವಿದ್ಯಾರ್ಥಿಯ ಮೇಲೆ ಪೊಲೀಸ್ ಪೇದೆಯೊಬ್ಬ ಅಮಾನುಷವಾಗಿ ಹಲ್ಲೆ ನಡೆಸಿದ ಘಟನೆ ಪುತ್ತೂರಿನ ದರ್ಬೆಯಲ್ಲಿ ನಡೆದಿದೆ.
ಬಸ್ ನಲ್ಲಿ ಸಂಚರಿಸುತ್ತಿದ್ದ ವಿದ್ಯಾರ್ಥಿ ಇಂದು ಬೆಳಿಗ್ಗೆ ಸುಳ್ಯದ ಕಾಲೇಜಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಅನಾರೋಗ್ಯದ ಕಾರಣ ಬಸ್ ನಲ್ಲೇ ವಾಂತಿ ಮಾಡಿಕೊಂಡಿದ್ದ. ಈ ಸಂದರ್ಭದಲ್ಲಿ ವಾಂತಿಯಾದ ವಸ್ತುಗಳು ಅದೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ಬೈಕ್ ಸವಾರರ ಮೇಲೆ ಬಿದ್ದಿತ್ತು.
ಇದನ್ನು ಆಕ್ಷೇಪಿಸಿದ ಬೈಕ್ ಸವಾರರು ವಿದ್ಯಾರ್ಥಿಗೆ ಬೈಯಲು ಮುಂದಾದರೂ, ಬಳಿಕ ಆತನ ಅಸೌಖ್ಯವನ್ನು ಕಂಡು ಘಟನೆಯನ್ನು ಅಲ್ಲಿಗೇ ಮುಗಿಸಿದ್ದರು.
ಆದರೆ ಆ ಸಮಯದಲ್ಲಿ ಸ್ಥಳದಲ್ಲಿ ಪುತ್ತೂರು ಸಂಚಾರಿ ಠಾಣೆಯ ಪೇದೆಯೊಬ್ಬ ನೇರವಾಗಿ ವಿದ್ಯಾರ್ಥಿಗೆ ಹಲ್ಲೆ ನಡೆಸಿದ್ದಾನೆ.
ಅನಾರೋಗ್ಯದಿಂದ ಬಳಲುತ್ತಿದ್ದ ಆ ವಿದ್ಯಾರ್ಥಿಗೆ ವಾಚಾಮಗೋಚರ ತನ್ನ ಪೋಲೀಸ್ ಭಾಷೆಯಲ್ಲಿ ತರಾಟೆಗೂ ತೆಗೆದುಕೊಂಡಿದ್ದಾನೆ. ಅನಾರೋಗ್ಯದಿಂದ ಬಳಲುತ್ತಿದ್ದ ವಿದ್ಯಾರ್ಥಿ ಎಂದೂ ನೋಡದೆ ಹಲ್ಲೆ ನಡೆಸಿದ ಪೊಲೀಸಪ್ಪನಿಗೆ ಸ್ಥಳದಲ್ಲಿ ಜಮಾಯಿಸಿದ್ದ ಸಾರ್ವಜನಿಕರು ಕೊಂಚ ಉಗಿದಿದ್ದಾರೆ.
ಹೊಸದಾಗಿ ಪೊಲೀಸ್ ಠಾಣೆಗೆ ಬಂದಿರುವ ಈ ಪೋಲೀಸಪ್ಪನಿಗೆ ಸಾರ್ವಜನಿಕರ ಜೊತೆ ಹೇಗೆ ವ್ಯವಹರಿಸಬೇಕು ಎನ್ನುವುದನ್ನು ತಿಳಿಸುವ ಪ್ರಯತ್ನವನ್ನು ಮೊದಲು ಮಾಡಬೇಕಿದೆ.ಪೊಲೀಸ್ ಎನ್ನುವ ಕಾರಣಕ್ಕೆ ಪೋಕಿರಿಯಂತೆ ವರ್ತಿಸುವ ಇಂಥ ಪೊಲೀಸರ ಮೇಲೆ ಕ್ರಮ ಜರುಗಿಸಬೇಕಿದೆ.