Connect with us

    LATEST NEWS

    ಮಣಿಪಾಲ ಅಪಾರ್ಟಮೆಂಟ್ ನಲ್ಲಿ ಕಳ್ಳತನದ ಆರೋಪಿ ಶಿವಮೊಗ್ಗದಲ್ಲಿ ಅರೆಸ್ಟ್

    ಉಡುಪಿ ಫೆಬ್ರವರಿ 08: ಮಣಿಪಾಲದ ಅಪಾರ್ಟ್‌ಮೆಂಟ್‌ನಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಮುರುಳಿ ಎನ್‌.ಡಿ. ಎಂದು ಗುರುತಿಸಲಾಗಿದ್ದು, ಆತನನ್ನು ಮಣಿಪಾಲ ಪೊಲೀಸರು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ದೊಡ್ಡೇರಿಯಲ್ಲಿ.


    ಆರೋಪಿ ಜನವರಿ 28ರಂದು ಮಣಿಪಾಲದ ವಿದ್ಯಾರತ್ನ ನಗರದಲ್ಲಿರುವ ಅಪಾರ್ಟ್‌ ಮೆಂಟ್‌ನ 2ನೇ ಮಹಡಿಯಲ್ಲಿರುವ ಎರಡು ಕೊಠಡಿಗಳಲ್ಲಿ ಕಳ್ಳತನ ನಡೆದಿತ್ತು. ಕಳ್ಳರು ಲ್ಯಾಪ್‌ಟಾಪ್‌, ಕೆಮರಾ, ಸ್ಮಾರ್ಟ್‌ ವಾಚ್‌, ಪವರ್‌ ಬ್ಯಾಂಕ್‌ ಪರ್ಸ್‌, 3 ಮೊಬೈಲ್‌ಗ‌ಳನ್ನು ಕಳವು ಮಾಡಿದ್ದರು. ಕಳವಾದ ಸೊತ್ತುಗಳ ಒಟ್ಟು ಮೌಲ್ಯ 3,23,500 ರೂ. ಆಗಿತ್ತು.

     

    Share Information
    Advertisement
    Click to comment

    Leave a Reply

    Your email address will not be published. Required fields are marked *