LATEST NEWS
ಮಂಗಳೂರಿನಲ್ಲಿ ಪ್ರಧಾನಿ ಮೋದಿ ರೋಡ್ ಶೋ -ಸ್ನೈಪರ್ ಕಣ್ಗಾವಲು
ಮಂಗಳೂರು ಎಪ್ರಿಲ್ 14 : ಪ್ರಧಾನಿ ನರೇಂದ್ರ ಮೋದಿ ಮಂಗಳೂರಿನ ರೋಡ್ ಶೋ ಗೆ ಸಿದ್ದತೆ ಪೂರ್ಣಗೊಂಡಿದ್ದು, ಪ್ರಧಾನಿ ಮೋದಿ ಭದ್ರತೆ ಹೊತ್ತಿರುವ ಎಸ್ ಪಿಜಿ ಅಧಿಕಾರಿಗಳು ಶನಿವಾರ ರಾತ್ರಿ ಟ್ರಯಲ್ ರನ್ ಮೂಲಕ ರೋಡ್ ಶೋ ಸಿದ್ದತೆ ಪರಿಶೀಲನೆ ನಡೆಸಿದ್ದಾರೆ.
ಹೊಸದಿಲ್ಲಿ ಯಿಂದ ಆಗಮಿಸಿರುವ ಎಸ್‌ಪಿಜಿ ಅಧಿ ಕಾರಿಗಳು ರೋಡ್ ಶೋ ಸಾಗುವ ಮಾರ್ಗದ ಮೇಲೆ ನಿಗಾ ಇಟ್ಟಿದ್ದಾರೆ. ರ್‍ಯಾಲಿ ನಡೆಯುವ ರಸ್ತೆಯುದ್ದಕ್ಕೂ 25ಕ್ಕೂ ಅಧಿಕ ಸಿಸಿ ಟಿವಿ ಕೆಮರಾ ಅಳವಡಿಸಲಾಗಿದೆ. ರೋಡ್ ಶೋ ನಡೆಯುವ ರಸ್ತೆ ಬದಿಗಳ ಕಟ್ಟಡಗಳಲ್ಲಿ ರವಿವಾರ ಉಳಿದು ಕೊಳ್ಳುವವರ ಆಧಾರ್ ಕಾರ್ಡ್ ದಾಖಲೆಗಳನ್ನು ಪಡೆದುಕೊಳ್ಳಲು ಕಟ್ಟಡ ಮಾಲಕರಿಗೆ ಪೊಲೀಸರು ಸೂಚಿಸಿದ್ದಾರೆ. ಈ ರಸ್ತೆ ರವಿವಾರ ರೋಡ್‌ಶೋಗೆ ಪೂರ್ಣ ಸಿದ್ಧಗೊಳ್ಳಲಿದ್ದು, ಮಧ್ಯಾಹ್ನದ ಬಳಿಕ ಎಲ್ಲ ವಾಹನಗಳ ಸಂಚಾರ ಸ್ಥಗಿತಗೊಳ್ಳಲಿದೆ. ಬಳಿಕ ಪೂರ್ಣವಾಗಿ ಪೊಲೀಸರ ಸುಪರ್ದಿಗೆ ಬರಲಿದೆ.
ಎಡಿಜಿಪಿ, ಐಜಿಪಿ, 5 ಎಸ್‌ಪಿ/ ಡಿಸಿಪಿ, 10 ಡಿವೈಎಸ್‌ಪಿ/ ಎಸಿಪಿ, 36 ಇನ್ಸ್‌ಪೆಕ್ಟರ್, 67 ಪಿಎಸ್‌ಐ, 147 ಎಎಸ್‌ಐ, 1,207 ಹೆಡ್‌ಕಾನ್‌ಸ್ಟೆಬಲ್/ಕಾನ್‌ಸ್ಟೆಬಲ್‌ಗಳು, 92 ಗೃಹರಕ್ಷಕರು, 5 ಕೆಎಸ್‌ಆರ್‌ಪಿ ತುಕಡಿ, 19 ಸಿಎಆರ್ ತುಕಡಿ, 2 ಸಿಆರ್‌ಪಿಎಫ್ ತುಕಡಿ, 4 ಎಎಸ್‌ಸಿ ತಂಡ, 1 ಬಿಡಿಡಿಎಸ್ ತಂಡ, 30 ಡಿಎಫ್ಎಂಡಿ/ಎಚ್‌ಎಚ್‌ಎಂಡಿ, 34 ಸೆಕ್ಟರ್ ಮೊಬೈಲ್‌ಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಪ್ರಧಾನಿ ಮೋದಿಯವರ ರೋಡ್ ಶೋ ರೋಡ್ ಶೋ ವೇಳೆ ಎತ್ತರದ ಆಯಕಟ್ಟಿನ ಕಟ್ಟಡಗಳಲ್ಲಿ ಎಸ್‌ಪಿಜಿ ಯ ಸ್ನೆ„ಪರ್‌ಗಳು ಹದ್ದಿನ ಕಣ್ಣು ಇರಿಸ ಲಿದ್ದಾರೆ. ಹಲವು ನೂರು ಮೀಟರ್‌ಗಳಷ್ಟು ದೂರ ಪ್ರಬಲ ಫೋಕಸ್ ಹೊಂದಿರುವ ಲೈಟ್‌ಗಳನ್ನು ಹಾಕಿ ಯಾವುದೇ ಅಪಾಯ ಎದುರಾಗದಂತೆ ನೋಡಿಕೊಳ್ಳಲಾಗುತ್ತದೆ.