National
ಭಾರತ-ಚೀನಾ ಗಡಿ ಪರಿಶೀಲನೆಗೆ ತೆರಳಿದ ಪ್ರಧಾನಿ ಮೋದಿ….!!
ಲಡಾಕ್, ಜುಲೈ 3: ಭಾರತ- ಚೀನಾ ಗಡಿಭಾಗದಲ್ಲಿ ಚೀನಾದ ತಕರಾರಿಗೆ ಪ್ರತ್ಯುತ್ತರ ನೀಡಲು ಭಾರತ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಸ್ವತಹ ಭಾರತ-ಚೀನಾ ಗಡಿಭಾಗವಾದ ಲೇಹ್ ಹಾಗೂ ಲಡಾಕ್ ಗೆ ಭೇಟಿ ನೀಡಿ ಪರಿಸ್ಥಿತಿಯ ಅವಲೋಕಿಸುವ ಮೂಲಕ ಚೀನಾದ ಮತ್ತೊಂದು ನೇರ ಸಂದೇಶವನ್ನು ನೀಡಿದ್ದಾರೆ.
ಪ್ರಧಾನಿ ನೇರೇಂದ್ರ ಮೋದಿ ಪ್ರತೀ ಬಾರಿಯೂ ಭಾರತದ ಸೌರ್ವಭೌಮತ್ವಕ್ಕೆ ಧಕ್ಕೆ ತರುವ ಯತ್ನವನ್ನು ಸಹಿಸುವುದಿಲ್ಲ ಎಂದು ಚೀನಾಕ್ಕೆ ಖಡಕ್ ಸಂದೇಶ ರವಾನಿಸಿದ್ದು, ಇದೀಗ ಸ್ವತಹ ಚೀನಾ ಗಡಿಗೆ ಭೇಟಿ ನೀಡಿರುವುದು ಹಲವು ಕುತೂಹಲಗಳಿಗೆ ಕಾರಣವಾಗಿದೆ.
ಈಗಾಗಲೇ ಚೀನಾದ 59 ಆ್ಯಪ್ ಗಳನ್ನು ಭಾರತದಲ್ಲಿ ನಿಶೇಧ ಮಾಡಿರುವ ಕೇಂದ್ರ ಸರಕಾರ ಚೀನಾಕ್ಕೆ ಡಿಜಿಟಲ್ ಸ್ಟ್ಮೈಕ್ ಕೊಟ್ಟಿದೆ. ಭಾರತೀಯ ವಾಯುಸೇನೆಯ ಹೆಲಿಕಾಪ್ಟರ್ ಮೂಲಕ ಲೇಹ್ ಹಾಗೂ ಲಡಾಕ್ ನ ಗಡಿಭಾಗದ ಸ್ಥಿತಿಯ ಬಗ್ಗೆ ಸೇನೆಯ ಅಧಿಕಾರಿಗಳಿಂದ ಪ್ರಧಾನಿ ಮೋದಿ ಮಾಹಿತಿ ಪಡೆದಿದ್ದಾರೆ. ಪ್ರಧಾನಿ ಜೊತೆ ಡಿಫೆನ್ಸ್ ಚೀಫ್ ಬಿಪಿನ್ ರಾವತ್, ಆರ್ಮಿ ಚೀಫ್ ಎಮ್.ಎಮ್. ನರವಾನೆ ಕೂಡಾ ಉಪಸ್ಥಿತರಿದ್ದು, ಗಡಿಯ ಸದ್ಯದ ಪರಿಸ್ಥಿತಿಯ ಬಗ್ಗೆ ಚರ್ಚೆಯನ್ನೂ ನಡೆಸಿದ್ದಾರೆ.
ವಿಶ್ವದ ಅತೀ ದೊಡ್ಡ ಸೇನೆಗಳಲ್ಲಿ ಒಂದಾಗಿರುವ ಭಾರತ ಪ್ರಧಾನಿ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಗಡಿಗೆ ತೆರಳಿ ಪರಿಶೀಲನೆ ನಡೆಸಿರುವ ವಿಚಾರ ಮಹತ್ವ ಪಡೆದಿದೆ.