Connect with us

    BELTHANGADI

    ಪ್ರಧಾನಿ ಮೋದಿ ಧರ್ಮಸ್ಥಳ ಭೇಟಿ -24 ಗಂಟೆ ಸಾರ್ವಜನಿಕರಿಗೆ ದೇವರ ದರ್ಶನ ಇಲ್ಲ

    ನರೇಂದ್ರ ಮೋದಿ ಧರ್ಮಸ್ಥಳ ಭೇಟಿ – ಸಾರ್ವಜನಿಕರಿಗೆ ದೇವರ ದರ್ಶನದ ಸಮಯ ಬದಲಾವಣೆ

    ಮಂಗಳೂರು ಅಕ್ಟೋಬರ್ 25: ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನಲೆ. ಕ್ಷೇತ್ರದ ಸಾರ್ವಜನಿಕರ ಭೇಟಿ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆ ಹೊರಡಿಸಿದೆ.

    ಅಕ್ಟೋಬರ್ 29 ರಂದು ಧರ್ಮಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಿ ದೇವರ ದರ್ಶನ ಪಡೆಯಲಿದ್ದಾರೆ. ಅದೇ ದಿನ ಬೆಳ‌್ತಂಗಡಿ ತಾಲೂಕಿನ ಉಜಿರೆಯಲ್ಲಿ ನಡೆಯಲಿರುವ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಭಾಗವಹಿಸಲಿದ್ದಾರೆ.

    ಈ ಹಿನ್ನಲೆಯಲ್ಲಿ ಪ್ರಧಾನಿ ಮಂತ್ರಿಯವರ ಭದ್ರತಾ ದೃಷ್ಠಿಯಿಂದ ಧರ್ಮಸ್ಥಳದಲ್ಲಿ ಸಾರ್ವಜನಿಕರಿಗೆ ದೇವರ ದರ್ಶನದ ಸಮಯದಲ್ಲಿ ಬದಲಾವಣೆ ಮಾಡಲಾಗಿದ್ದು, ಅಕ್ಟೋಬರ್ 28 ನೇ ತಾರೀಖು ಮಧ್ಯಾಹ್ನ 2.00 ಗಂಟೆಯಿಂದ 29 ನೇ ತಾರೀಖಿನ ಮಧ್ಯಾಹ್ನ 2.00 ಗಂಟೆಯ ತನಕ ಸಾರ್ವಜನಿಕರಿಗೆ ದರ್ಶನ ವ್ಯವಸ್ಥೆ ‌ಸ್ಥಗಿತಗೊಳಿಸಲಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ದಿಂದ ಪ್ರಕಟನೆ ನೀಡಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply