LATEST NEWS
ನವಿಲಿನ ಜೊತೆ ಪ್ರಧಾನಿ ನರೇಂದ್ರ ಮೋದಿ ವಾಕಿಂಗ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರಪಕ್ಷಿ ನವೀಲಿನ ಜೊತೆ ವಾಕಿಂಗ್ ಮಾಡುತ್ತಿರುವ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿದ್ದಾರೆ.
ದೆಹಲಿಯ ಲೋಕಕಲ್ಯಾಣ್ ಮಾರ್ಗದಲ್ಲಿರುವ ನಿವಾಸದಲ್ಲಿರುವ ಜಾಗವನ್ನು ಪ್ರಧಾನಿ ನರೇಂದ್ರ ಮೋದಿ ಗ್ರಾಮೀಣ ಭಾಗದಲ್ಲಿರುವಂತೆ ಬದಲಾವಣೆ ಮಾಡಿದ್ದಾರೆ. ಹೀಗಾಗಿ ಈ ಜಾಗದಲ್ಲಿ ಹಲವು ಪಕ್ಷಿಗಳು ಗೂಡುಗಳನ್ನು ಕಟ್ಟಿಕೊಂಡಿವೆ. ವಿಡಿಯೋದಲ್ಲಿ ಪ್ರಧಾನಿ ಮೋದಿಯವರು ತಮ್ಮ ನಿವಾಸದ ಹೊರಗಡೆ ಮತ್ತು ಒಳಗಡೆ ನವಿಲುಗಳಿಗೆ ಆಹಾರ ಹಾಕುತ್ತಿರುವ ದೃಶ್ಯವಿದೆ. ಅಷ್ಟೇ ಅಲ್ಲದೇ ಮೋದಿ ಬೆಳಗ್ಗೆ ವಾಕಿಂಗ್ ಮಾಡುವ ವೇಳೆ ನವಿಲು ಗರಿ ಬಿಚ್ಚಿ ಹೆಜ್ಜೆ ಹಾಕುವುದನ್ನು ನೋಡಬಹುದು.

ಪ್ರತಿ ದಿನ ವಾಕಿಂಗ್ ಮಾಡುವ ಸಂದರ್ಭದಲ್ಲಿ ಪ್ರಧಾನಿ ಜೊತೆ ನವಿಲುಗಳು ಸಹ ಹೆಜ್ಜೆ ಹಾಕುತ್ತದೆ ಎಂದು ಮೂಲಗಳನ್ನು ಉಲ್ಲೇಖಿಸಿ ವರದಿಯಾಗಿದೆ. ವಿಡಿಯೋದಲ್ಲಿ ಪ್ರಧಾನಿ ಓದುತ್ತಿದ್ದಾಗ ನವಿಲು ಆಹಾರವನ್ನು ತಿನ್ನುತ್ತಿರುವ ಫೋಟೋ ಸಹ ಇದೆ. 1 ನಿಮಿಷ 47 ಸಕೆಂಡಿನ ವಿಡಿಯೋವನ್ನು ಫೇಸ್‍ಬುಕ್, ಯೂ ಟ್ಯೂಬ್, ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಫೇಸ್‍ಬುಕ್‍ನಲ್ಲಿ ಅಪ್ಲೋಡ್ ಆದ ಒಂದು ಗಂಟೆಯ ಒಳಗಡೆ ವಿಡಿಯೋ 10 ಲಕ್ಷಕ್ಕೂ ಅಧಿಕ ವ್ಯೂ ಕಂಡಿದೆ.