LATEST NEWS
ಗಮನಿಸಿ : ನಾಳೆ ಮಗಳವಾರ ಮಂಗಳೂರು ನಗರದಲ್ಲಿ ನೀರಿಲ್ಲ..!

ಮಂಗಳೂರು: ತುಂಬೆ ರೇಚಕ ಸ್ಥಾವರದಿಂದ ಮಂಗಳೂರು ನಗರಕ್ಕೆ ನೀರು ಹರಿಯುವ ಮುಖ್ಯಕೊಳವೆ ಅಳವಡಿಕೆಯ ಕಾಮಗಾರಿಯಿಂದ ಎ.30ರಂದು ಬೆಳಗ್ಗೆ 6ರಿಂದ ಮೇ 1ರ ಬೆಳಗ್ಗೆ 6ರವರೆಗೆ ಮಂಗಳೂರಿನ ಹಲವು ಭಾಗಗಳಿಗೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಈ ಮುಖ್ಯಕೊಳವೆಯನ್ನು ರಾಮಲ್ ಕಟ್ಟೆ ಹಾಗೂ ಪಡೀಲ್ ರೇಚಕ ಸ್ಥಾವರದ ಬಳಿ ಕೆಯುಐಡಿಎಫ್‌ಸಿ ವತಿಯಿಂದ ಅಳವಡಿಸಲಾಗುತ್ತಿದೆ. ಆದ್ದರಿಂದ ಪಡೀಲ್, ಮರೋಳಿ, ಕಂಕನಾಡಿ, ಮಂಗಳಾದೇವಿ, ಜಪ್ಪು, ಫಳ್ನೀರು, ಮುಳಿಹಿತ್ಲು, ಬೋಳಾರ, ಕಾರ್‌ಸ್ಟ್ರೀಟ್, ಮಣ್ಣಗುಡ್ಡ, ಪಾಂಡೇಶ್ವರ, ಸ್ಟೇಟ್ ಬ್ಯಾಂಕ್, ಶಕ್ತಿನಗರ, ಕಣ್ಣೂರು, ಬಜಾಲ್, ಜಪ್ಪಿನಮೊಗರು, ಅಳಪೆ, ಅತ್ತಾವರ, ಉಲ್ಲಾಸ್‌ನಗರ, ಚಿಲಿಂಬಿ, ಕೋಡಿಕಲ್, ಉರ್ವಾಸ್ಟೋರ್, ಅಶೋಕ ನಗರ, ಕುಡುಪು, ವಾಮಂಜೂರು, ಬೊಂದೇಲ್, ಕಾವೂರು ಹಾಗೂ ಮರಕಡ ಭಾಗಶಃ ಮೊದಲಾದ ಪ್ರದೇಶಗಳಿಗೆ ಸಂಪೂರ್ಣವಾಗಿ ನೀರು ನಿಲುಗಡೆಗೊಳಿಸಲಾಗುತ್ತದೆ ಎಂದು ಪಾಲಿಕೆಯ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.
