LATEST NEWS
ಪಿಲಿಕುಳದಲ್ಲಿ ಹುಲಿಗಳ ಕಾಳಗ – ಒಂದು ಹುಲಿ ಸಾವು

ಮಂಗಳೂರು ಜೂನ್ 07: ಎರಡು ಹುಲಿಗಳ ನಡುವೆ ನಡೆದ ಕಾಳಗದಲ್ಲಿ ಒಂದು ಹುಲಿ ಮೃತಪಟ್ಟ ಘಟನೆ ಪಿಲಿಕುಳದ ಡಾ. ಶಿವರಾಮ ಕಾರಂತ ಜೈವಿಕ ಮೃಗಾಲಯದಲ್ಲಿ ನಡೆದಿದೆ.
ತನ್ನ ಸಂಗಾತಿಯೊಂದಿಗಿನ ಕಾದಾಟದಲ್ಲಿ 15 ವರ್ಷದ ಹೆಣ್ಣು ಹುಲಿ ಗಾಯಗೊಂಡಿತ್ತು. ಹೀಗಾಗಿ ನಿರಂತರ ಚಿಕಿತ್ಸೆ ನೀಡಲಾಗುತ್ತಿದ್ದರೂ, ಹೆಣ್ಣುಹುಲಿ ಜೂನ್ 07ರ ಇಂದು ಬೆಳಗ್ಗೆ ಸಾವನ್ನಪ್ಪಿದೆ. ಮೃತಪಟ್ಟ ಹುಲಿಯ ಮರಣೋತ್ತರ ಪರೀಕ್ಷಾ ವರದಿ ಸಿಗಬೇಕಾಗಿದೆ ಎಂದು ಜೈವಿಕ ಉದ್ಯಾನವನದ ನಿರ್ದೇಶಕ ಪ್ರಕಾಶ್ ಭಂಡಾರಿ ತಿಳಿಸಿದ್ದಾರೆ

Continue Reading