DAKSHINA KANNADA
ಪಿಲಿಕುಳ ನಿಸರ್ಗಧಾಮದ ರಾಜ ಹುಲಿ ‘ವಿಕ್ರಂ ‘ ಇನ್ನಿಲ್ಲ
ಮಂಗಳೂರು, ಅಕ್ಟೋಬರ್ 26: ಮಂಗಳೂರಿನ ಪಿಲಿಕುಳ ನಿಸರ್ಗಧಾಮದಲ್ಲಿದ್ದ ರಾಜ ಹುಲಿ ‘ವಿಕ್ರಂ ‘ ಇಹಲೋಕ ತ್ಯಜಿಸಿದ್ದಾನೆ. 21 ವರ್ಷದ ವಿಕ್ರಂ ಪಿಲಿಕುಳದ ಅತೀ ಹಿರಿಯ ಹುಲಿಯಾಗಿತ್ತು. ವಯೋಸಹಜ ಕಾಯಿಲೆಯಿಂದ ವಿಕ್ರಂ ಮೃತಪಟ್ಟಿದೆ ಎಂದು ಪಿಲಿಕುಳ ನಿಸರ್ಗಧಾಮದ ಅಧಿಕಾರಿಗಳು ಮಾಹಿ ನೀಡಿದ್ದಾರೆ.
2003 ರಲ್ಲಿ ಶಿವಮೊಗ್ಗ ತಾವರೆ ಕೊಪ್ಪದಿಂದ ಈ ಹುಲಿಯನ್ನು ಪಿಲಿಕುಳ ತರಲಾಗಿತ್ತು. ಪ್ರಸ್ತುತ ಪಿಲಿಕುಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದರು ವಿಕ್ರಂ ವಿಶೇಷ ಹಾವಭಾವದಿಂದ ಹೆಚ್ಚು ಜನಾಕರ್ಷಣೆಯ ಬಿಂದುವಾಗಿತ್ತು. ಅತೀ ಹೆಚ್ಚು ಚಟುವಟಿಕೆಯಿಂದ ಇರುತ್ತಿದ್ದ ವಿಕ್ರಂ ಕಳೆದ 5 ತಿಂಗಳುಗಳಿಂದ ವಯೋ ಸಹಜ ಕಾಯಿಗಳಾದ ವಾತಾ ಮತ್ತು ದೃಷ್ಟಿ ದೋಷದಿಂದ ಬಳಲುತ್ತಿತ್ತು. ಈ ಹಿನ್ನೆಲೆಯಲ್ಲಿ ಹೊರಗಡೆ ಸುತ್ತಾಡಲು ಬಿಡದೆ ಒಳಗಡೆಯೇ ಆರೇಕೆ ಮಾಡಲಾಗುತ್ತಿತ್ತು.
ಆದರೆ ಕಳೆದ 5 ದಿನಗಳಿಂದ ಏಕಾಏಕಿ ಆಹಾರವನ್ನು ತ್ಯಜಿಸಿದ್ದರಿಂದ ಅದಕ್ಕೆ ಸಿರಿಂಜ್ ಮೂಲಕ ಶಕ್ತಿವರ್ದನೆಗಾಗಿ ಗ್ಲೂಕೋಸ್ ಮತ್ತು ಇತರ ಮದ್ದುಗಳನ್ನು ನೀಡಿ ಜತನದಿಂದ ಆರೈಕೆಯನ್ನು ಮಾಡಲಾಗುತ್ತಿತ್ತು. ಆದರೆ ಇಂದು ಬೆಳಿಗ್ಗೆ ವಿಕ್ರಂ ಇಹಲೋಕ ತ್ಯಜಿಸಿದ್ದಾನೆ.
ಸಾಧಾರಣವಾಗಿ ಕಾಡಲ್ಲಿ ರುವ ಹುಲಿಗಳು 13 ರಿಂದ 15 ವರ್ಷಗಳ ಬದುಕಿದರೆ, ಮೃಗಾಲಗಳಲ್ಲಿ 16 ರಿಂದ 18 ವರ್ಷಗಳ ಕಾಲ ಬದುಕಿರುತ್ತದೆ. ಆದರೆ ವಿಕ್ರಂ ಮಾತ್ರ 21 ವರ್ಷಗಳ ಕಾಲ ಬದುಕಿತ್ತು. ವನ್ಯ ಜೀವಿಗಳ ನಿರ್ವಹಣೆಯ ಮಾರ್ಗಸೂಚಿಗಳ ಪ್ರಕಾರ ಮೂವರು ವೈದ್ಯರುಗಳ ತಂಡ ವಿಕ್ರಂ ನ ಶವದ ಮಹಜರು ನಡೆಸಿ ಕೆಲವು ಮಾದರಿಗಳನ್ನು ಸಂಗ್ರಹಿಸಿ ಬೆಂಗಳೂರಿಗೆ ಕಳುಹಿಸಿ ಕೊಟ್ಟಿದ್ದಾರೆ ಎಂದು ಪಿಲಿಕುಳದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.