DAKSHINA KANNADA
ಕೋಳಿ ಸಾಗಾಟದ ವಾಹನ ಪಲ್ಟಿ – ಕೋಳಿ ಪ್ರಿಯರಿಗೆ ಹಬ್ಬದೂಟ

ಪುತ್ತೂರು ಫೆಬ್ರವರಿ 08: ಕೋಳಿ ಸಾಗಾಟದ ಪಿಕಪ್ ಟೆಂಪೋ ಒಂದು ಪಲ್ಟಿಯಾದ ಘಟನೆ ಕನ್ಯಾನ-ಕುಳಾಲು-ಸಾಲೆತ್ತೂರು ಸಂಪರ್ಕದ ಕಳೆಂಜಿಮಲೆ ರಕ್ಷಿತಾರಣ್ಯದ ಒಳರಸ್ತೆಯಲ್ಲಿ ನಡೆದಿದೆ.
ಅಪಘಾತದಲ್ಲಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಮಿಳುನಾಡು ನೋಂದಣಿಯ ಪಿಕಪ್ ಟೆಂಪೋ ಇದಾಗಿದ್ದು, ಕನ್ಯಾನ ಜಂಕ್ಷನಿಂದ ಕಳೆಂಜಿಮಲೆ ರಕ್ಷಿತಾರಣ್ಯದಲ್ಲಿ ಹಾದುಹೋಗುವ ತೀರಾ ಕಡಿದಾದ ಏರು ರಸ್ತೆಯಲ್ಲಿ, ಮುಂದಿನಿಂದ ಬರುತ್ತಿದ್ದ ಇನ್ನೊಂದು ವಾಹನಕ್ಕೆ ಸೈಡ್ ಕೊಡುವ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿ ಟೆಂಪೋ ರಸ್ತೆ ಬದಿಗೆ ಪಲ್ಟಿಯಾಗಿದೆ. ವಾಹನದಲ್ಲಿದ್ದ ಕೋಳಿಗಳಲ್ಲಿ ಕೆಲವು ಸಾವನಪ್ಪಿದ್ದು, ಸ್ಥಳೀಯರು ಕೋಳಿಗಳನ್ನು ಹೊತ್ತೊಯ್ದಿದ್ದಾರೆ. ಚಿಕನ್ ಪ್ರಿಯರಿಗೆ ಹಬ್ಬದೂಟದ ಚಾನ್ಸ್ ಸಿಕ್ಕಿದೆ. ಕ್ರೇನ್ ಮೂಲಕ ವಾಹನವನ್ನು ಮೇಲಕ್ಕೆತ್ತಲಾಗಿದೆ.
