Connect with us

    LATEST NEWS

    ಬಳಸಿದ ಒಳ ಉಡುಪುಗಳನ್ನು ಮಾರಾಟ ಮಾಡಿ ಲಕ್ಷ ಸಂಪಾದಿಸೋ ಭೌತಶಾಸ್ತ್ರದ ವಿಧ್ಯಾರ್ಥಿನಿ

    ಲಂಡನ್​ : ಹಿಂದೆ ಆಸ್ಟ್ರೇಲಿಯಾದ ಕಾರ್ ರೇಸ್ ರ ಒಬ್ಬಳು ಪೋರ್ನ್ ವೆಬ್ ಸೈಟ್ ಗೆ ತನ್ನ ಮಾದಕ ವಿಡಿಯೋಗಳನ್ನು ಅಪ್ಲೋಡ್ ಮಾಡುವ ಲಕ್ಷಾಂತರ ರೂಪಾಯಿ ಹಣ ಗಳಿಸುತ್ತಿರುವ ಸುದ್ದಿ ಭಾರೀ ಸದ್ದು ಮಾಡಿತ್ತು. ಆದರೆ ಈಗ ಮತ್ತೊಬ್ಬಳು ಯುವತಿ ಕೂಡ ತನ್ನ ಬಳಸಿದ ಒಳ ಉಡುಪುಗಳನ್ನು ಮಾರಾಟ ಮಾಡಿ ತಿಂಗಳಿಗೆ ಲಕ್ಷ ಲಕ್ಷ ಹಣ ಗಳಿಸುತ್ತಿದ್ದಾರೆ. ಲಂಡನ್​ನ ನ್ಯೂಕ್ಯಾಸ್ಟ್ಲೆ ವಿಶ್ವವಿದ್ಯಾಲಯದಲ್ಲಿ ಫಿಸಿಕ್ಸ್​ ವಿದ್ಯಾರ್ಥಿನಿಯಾಗಿರುವ ಈ ಬೆಡಗಿ ಹಣ ಮಾಡಲು ಹಿಡಿದಿರುವ ದಾರಿ ಮಾತ್ರ ವಿಭಿನ್ನವಾಗಿದೆ.


    30 ವರ್ಷ ವಯಸ್ಸಿನ ಯುವತಿ ಮಲ್ ಬೋರ್ನ್ ತಾನು ಧರಿಸಿರುವ ಒಳ ಉಡುಪುಗಳನ್ನ ವೆಬ್ ಸೈಟ್ ಒಂದರ ಮೂಲಕ ಮಾರಾಟ ಮಾಡಿ ಹಣ ಗಳಿಸುತ್ತಿದ್ದಾರೆ. ಅಲ್ಲದೆ ಈಕೆಯ ಒಳ ಉಡುಪುಗಳಿಗೆ ಅನ್ ಲೈನ್ ನಲ್ಲಿ ಹೆಚ್ಚು ಬೇಡಿಕೆ ಇದೆ. ಈಕೆ ಮೆಲ್ ನ್ಯೂಕ್ಯಾಸ್ಟಲ್ ಮುಕ್ತ ವಿಶ್ವವಿದ್ಯಾನಿಲಯದ ಭೌತ ಶಾಸ್ತ್ರದ ವಿಧ್ಯಾರ್ಥಿನಿ. ತನ್ನ ಅಧ್ಯಯನಕ್ಕೆ ಹಣ ಸಾಕಾಗುತ್ತಿಲ್ಲ ಎಂದು ಯುವತಿ ವಿಭಿನ್ನ ರೀತಿಯಲ್ಲಿ ಹಣ ಮಾಡಲು ಹೊರಟಿದ್ದಾಳೆ.

    ಇವಳು ಯಾವಾಗ ತನ್ನ ಒಳ ಉಡುಪನ್ನು ಆನ್​ಲೈನ್​ನಲ್ಲಿ ಹಾಕುತ್ತಾಳೆ ಎಂದು ದಿನನಿತ್ಯವೂ ಕಾಯುವವರ ಸಂಖ್ಯೆ 20 ಸಾವಿರಕ್ಕೂ ಅಧಿಕವಿದೆಯಂತೆ. ಅಷ್ಟಕ್ಕೂ ಈಕೆಯ ಗ್ರಾಹಕರು ಶುಗರ್​ಡ್ಯಾಡಿಗಳಂತೆ. ಅರ್ಥಾತ್​ ಅತ್ಯಂತ ಶ್ರೀಮಂತ ವಯಸ್ಸಾದ ಪುರುಷರು ತಮ್ಮ ಲೈಂಗಿಕ ತೃಷೆಯನ್ನು ಬೇರೆ ಬೇರೆ ರೀತಿಯಲ್ಲಿ ತೀರಿಸಿಕೊಳ್ಳಲು ಚಿಕ್ಕ ಚಿಕ್ಕ ಹೆಣ್ಣುಮಕ್ಕಳನ್ನು ಈ ರೀತಿ ಹುಡುಕುತ್ತಿರುತ್ತಾರೆ. ಅಂಥವರನ್ನೇ ಹುಡುಕಿ ಹೆಕ್ಕಿ ತನ್ನ ಗ್ರಾಹಕರನ್ನಾಗಿ ಮಾಡಿಕೊಂಡಿದ್ದಾಳೆ ಮೆಲ್​.


    ಈಕೆ ಸದ್ಯ ತಿಂಗಳಿಗೆ 600 ಡಾಲರ್​ಗೂ ಹೆಚ್ಚು ಹಣ ಗಳಿಸುತ್ತಿದ್ದಾಳಂತೆ. ಭಾರತೀಯ ರೂಪಾಯಿ ಲೆಕ್ಕಾಚಾರದಲ್ಲಿ ಹೇಳುವುದಾದರೆ ಸುಮಾರು 45 ಸಾವಿರ ರೂಪಾಯಿಗಳು. ಮೊದಲು ನಾನು ಮಾಸ್ಕ್​ ಮಾರುತ್ತಿದ್ದೆ. ಇದಕ್ಕೆ ಅಷ್ಟೊಂದು ಬೇಡಿಕೆ ಬಂದಿರಲಿಲ್ಲ. ಅನೇಕ ಶುಗರ್​ಡ್ಯಾಡಿಗಳು ನನ್ನ ಒಳಉಡುಪಿನ ಬೇಡಿಕೆ ಇಟ್ಟರು. ಅದನ್ನೇ ಏಕೆ ಮಾರಾಟ ಮಾಡಬಾರದು ಎನ್ನಿಸಿ ಹೀಗೆ ಮಾಡುತ್ತಿದ್ದೇನೆ. ಇದರಿಂದ ನನ್ನ ಅಧ್ಯಯನಕ್ಕೂ ತುಂಬಾ ಪ್ರಯೋಜನ ಆಗುತ್ತಿದೆ ಎಂದಿದ್ದಾಳೆ ಈ ಸುಂದರಿ!


    ನಾನು ಉತ್ತಮ ಗುಣಮಟ್ಟದ ಒಳ ಉಡುಪಿ ಖರೀದಿಸಿ ಹೆಚ್ಚೆಂದರೆ ಎರಡು ದಿನಗಳವರೆಗೆ ಅವುಗಳನ್ನು ಧರಿಸುತ್ತೇನೆ. ಅವುಗಳನ್ನು ಧರಿಸಿರುವ ಫೋಟೋ ಅಪ್​ಲೋಡ್​ ಮಾಡುತ್ತೇನೆ. ಯಾವುದು ಬೇಕು ಎಂದು ಗ್ರಾಹಕರು ನನಗೆ ಕೇಳುತ್ತಾರೆ. ಅದನ್ನು ಅವರಿಗೆ ಕೊಡುತ್ತೇನೆ. ಕೆಲವೊಮ್ಮೆ ಬೇರೆ ಬೇರೆ ಭಂಗಿಯ ಚಿತ್ರಗಳನ್ನು ಅಪ್​ಲೋಡ್​ ಮಾಡುವಂತೆ ಅವರೇ ನನಗೆ ಕೇಳುತ್ತಾರೆ. ಅದರಂತೆ ನಾನು ಮಾಡುತ್ತೇನೆ ಎಂದಿದ್ದಾಳೆ

    Share Information
    Advertisement
    Click to comment

    Leave a Reply

    Your email address will not be published. Required fields are marked *