Connect with us

LATEST NEWS

ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಮೇಲೆ ತಲವಾರ್ ದಾಳಿ…

ಮಂಗಳೂರು ಡಿಸೆಂಬರ್ 16: ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಯ ಮೇಲೆ ದುಷ್ಕರ್ಮಿಯೊಬ್ಬ ತಲವಾರ್ ನಿಂದ ಹಲ್ಲೆ ನಡೆಸಿರುವ ಘಟನೆ ಮಂಗಳೂರಿನಲ್ಲಿ ಇಂದು ನಡೆದಿದೆ.


ಮಂಗಳೂರಿನ ರಥಬೀದಿಯ ಬಳಿಯ ನ್ಯೂಚಿತ್ರಾ ಟಾಕೀಸ್ ಮುಂಭಾಗದಲ್ಲಿ ಈ ಘಟನೆ ನಡೆದಿದ್ದು, ಬಂದರು ಠಾಣೆಯ ಹೆಡ್‌‌ ಕಾನ್ಸ್‌ಟೇಬಲ್‌‌‌ ಗಣೇಶ್‌‌ ಕಾಮತ್‌ ಹಾಗೂ ಇಬ್ಬರು ಸಿಬ್ಬಂದಿ ತಪಾಸಣೆ ವಾಹನಗಳ ನಿರತರಾಗಿದ್ದರು. ಈ ಸಂದರ್ಭ ಬೈಕ್‌ನಲ್ಲಿ ಬಂದ ಅಪರಿಚಿತ ದುಷ್ಕರ್ಮಿಯೋರ್ವ ಮುಖ್ಯ ಪೇದೆ ಗಣೇಶ್‌ ಕಾಮತ್‌ ಅವರ ಮೇಲೆ ಹಲ್ಲೆ ಮಾಡಿದ್ದಾನೆ. ಗಣೇಶ್‌ ಕಾಮತ್‌ ಅವರ ಕೈಗೆ ತಲವಾರಿನಿಂದ ಏಟು ಬಿದ್ದಿದ್ದು ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಯಾವುದೋ ದ್ವೇಷದ ಹಿನ್ನೆಲೆ ಈ ಹಲ್ಲೆ ನಡೆದಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಪೊಲೀಸರು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.  ಪೊಲೀಸ್ ಸಿಬ್ಬಂದಿಗಳ ಮೇಲೆಯ ತಲವಾರ್ ದಾಳಿ ನಡೆಸುವ ಮಟ್ಟಕ್ಕೆ ಕರಾವಳಿಯಲ್ಲಿ ಕಾನೂನೂ ಸುವ್ಯವಸ್ಥೆ ಕುಸಿದಿದ್ದು, ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ತಲವಾರ ದಾಳಿ ಗಳು ಹೆಚ್ಚಾಗುತ್ತಲೇ ಇದೆ.

Facebook Comments

comments