Connect with us

    LATEST NEWS

    ಕುಟುಂಬದ ಸದಸ್ಯನಿಗೆ ದೈಹಿಕ,ಮಾನಸಿಕ ಖಿನ್ನತೆ, ಉಡುಪಿ ಕಂಗಣಬೆಟ್ಟು ಅಣ್ಣಪ್ಪ ಪಂಜುರ್ಲಿ ಸನ್ನಿಧಾನಕ್ಕೆ ಬಂದು ಪೂಜೆ ಸಲ್ಲಿಸಿದ ಪಾಕಿಸ್ತಾನದ ಕುಟುಂಬ..!

    ಉಡುಪಿ: ಪಾಕಿಸ್ತಾನ ಮೂಲದ ಕುಟುಂಬವೊಂದು ಉಡುಪಿ ಕಂಗಣಬೆಟ್ಟು ಅಣ್ಣಪ್ಪ ಪಂಜುರ್ಲಿ ಸನ್ನಿಧಾನಕ್ಕೆ ಬಂದು ಪೂಜೆ ಸಲ್ಲಿಸಿದೆ.

    ಪಾಕಿಸ್ತಾನದಲ್ಲಿ ಪೂರ್ವಿಕರನ್ನು ಹೊಂದಿ, ಉತ್ತರ ಭಾರತಕ್ಕೆ ವಲಸೆ ಬಂದಿದ್ದ ಕುಟುಂಬ ಇದಾಗಿದೆ. ಯೂಟ್ಯೂಬ್​ನಲ್ಲಿ ತುಳುನಾಡಿನ ದೈವಗಳ ಬಗ್ಗೆ ತಿಳಿದು ಈ ಕುಟುಂಬದ ಸದಸ್ಯರು ಉಡುಪಿಗೆ ಆಗಮಿಸಿದ್ದಾರೆ. ಸದ್ಯ ಮುಂಬೈನಲ್ಲಿ ನೆಲೆಸಿರುವ ಕುಟುಂಬವು ಕಂಗಣಬೆಟ್ಟು ಅಣ್ಣಪ್ಪ ಪಂಜುರ್ಲಿ ಸನ್ನಿಧಾನಕ್ಕೆ ಆಗಮಿಸಿ ದೈವಕ್ಕೆ ಸೇವೆ ಸಲ್ಲಿಸಿತು. ಈ ಕುಟುಂಬದ ಸದಸ್ಯನೊಬ್ಬ ದೈಹಿಕ, ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾನೆ.

    ಆದಿತ್ಯ ಸಿಂಘಾನಿಯಾ ಎಂಬ ಹೆಸರಿನ ಯುವಕ ಎಂಬಿಎ ಪದವೀಧರನಾಗಿದ್ದು ಕಾಯಿಲೆಯಿಂದಾಗಿ ಉದ್ಯೋಗ ಮಾಡುತ್ತಿಲ್ಲ. ಇದೇ ಕಾರಣಕ್ಕೆ ಯುವಕ, ದೈವಕ್ಕೆ ಪೂಜೆ ಸಲ್ಲಿಸಿದ್ದಾನೆ. ಪೂಜೆಯ ಬಳಿಕ ದರ್ಶನ ಸೇವೆಯ ಮೂಲಕ ಸಂಕಷ್ಟ ಪರಿಹಾರಕ್ಕಾಗಿ ದೈವಕ್ಕೆ ಮೊರೆ ಇಟ್ಟಿದ್ದಾನೆ. ದೈವವು ಈ ಯುವಕನ ಕಾಯಿಲೆ ನಿವಾರಣೆಗೆ ಪೂಜೆಯ ಜೊತೆಗೆ ಸೂಕ್ತ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದೆ.

    Share Information
    Advertisement
    Click to comment

    You must be logged in to post a comment Login

    Leave a Reply