LATEST NEWS
ಪೋಟೋಶೂಟ್ ವೇಳೆ ಆನೆಯ ಸಿಟ್ಟು….!!
![](https://i0.wp.com/themangaloremirror.in/wp-content/uploads/2024/04/For-Advertisement-Please-Contact.jpg?fit=728%2C90&ssl=1)
ಕೇರಳ ಡಿಸೆಂಬರ್ 02 : ನವ ಜೋಡಿಯ ಪೋಟೋ ಶೂಟ್ ಸಂದರ್ಭ ಆನೆಯೊಂದು ವ್ಯಕ್ತಿಯೊಬ್ಬನ್ನು ಹಿಡಿದು ಎಳೆದು ಬಿಳಿಸಿದ ಘಟನೆ ಕೇರಳದ ಗುರುವಾಯೂರು ದೇವಸ್ಥಾನದಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮದುವೆ ಪೋಟೋಶೂಟ್ ಸಂದರ್ಭ ಆನೆಯೊಂದು ದೇವಸ್ಥಾನದ ಆವರಣದಲ್ಲಿ ನಿಂತಿತ್ತು, ಜೋಡಿ ಪೋಟೋ ತೆಗೆಯುತ್ತಿದ್ದಂತೆ ಆನೆ ತಿರುಗಿ ಪಕ್ಕದಲ್ಲಿ ಬರುತ್ತಿದ್ದ ವ್ಯಕ್ತಿಯೊಬ್ಬರನ್ನು ಸೊಂಡಿಲಿನಿಂದ ಹಿಡಿದು ಎಸೆದಿದೆ.
![](https://i0.wp.com/themangaloremirror.in/wp-content/uploads/2024/06/IMG-20240626-WA0023.jpg?fit=1280%2C670&ssl=1)
ಆನೆ ಕ್ರೋಧಗೊಳ್ಳುತ್ತಿದ್ದಂತೆ ನವಜೋಡಿ ಹಾಗೂ ಅಲ್ಲಿ ನೆರೆದಿದ್ದ ಭಕ್ತರು ಓಡಿ ಹೋಗಿದ್ದಾರೆ. ಮಾವುತ ಆನೆಯನ್ನು ನಿಯಂತ್ರಿಸಿದರಿಂದ, ಸುಮಾರು 50 ವರ್ಷ ವಯಸ್ಸಿನ ವ್ಯಕ್ತಿ ಕೇವಲ ಗಾಯಗೊಂಡು ಬಚಾವಾಗಿದ್ದಾರೆ. ಈ ದೃಶ್ಯವನ್ನು ನವಜೋಡಿಗೆ ಪೋಟೋಶೂಟ್ ಮಾಡುತ್ತಿದ್ದ ಪೋಟೋಗ್ರಾಫರ್ ಸೆರೆಹಿಡಿದಿದ್ದಾನೆ.
You must be logged in to post a comment Login