Connect with us

    LATEST NEWS

    ಪಿಎಚ್ ಡಿ ವಿಧ್ಯಾರ್ಥಿನಿ ಚೈತ್ರಾ ಹೆಬ್ಬಾರ್ ಮಿಸ್ಸಿಂಗ್ ಕೇಸ್- ಇನ್ನೂ ಸಿಗದ ಸುಳಿವು

    ಪುತ್ತೂರು ಫೆಬ್ರವರಿ 26: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪಿಎಚ್ ಡಿ ಅಧ್ಯಯನ ಮಾಡುತ್ತಿದ್ದ ಚೈತ್ರಾ ಹೆಬ್ಬಾರ್ ನಾಪತ್ತೆ ಪ್ರಕರಣದಲ್ಲಿ ಇಲ್ಲಿಯವರೆಗೆ ಯಾವುದೇ ಸುಳಿವು ಸಿಕ್ಕಿಲ್ಲ. ಈಗಾಗಲೇ ಪೊಲೀಸರು ಬೆಂಗಳೂರಿಗೆ ತೆರಳಿದ್ದ ನಾಪತ್ತೆಯಾಗಿರುವ ಚೈತ್ರಾ ಹೆಬ್ಬಾರ್ ಪತ್ತೆಗಾಗಿ ತನಿಖೆ ನಡೆಸುತ್ತಿದ್ದಾರೆ.


    ಪುತ್ತೂರು ನಿವಾಸಿ ಚೈತ್ರಾ ಹೆಬ್ಬಾರ್ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪಿ.ಎಚ್.ಡಿ ಅಧ್ಯಯನ ಮಾಡುತ್ತಿದ್ದರು. ಈ ನಡುವೆ ಶಾರೂಖ್ ಎಂಬ ಯುವಕನ ಪರಿಚಯವಾಗಿದ್ದು ಆತನ ಜೊತೆ ನಾಪತ್ತೆಯಾಗಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
    ಈಗಾಗಲೇ ತನಿಖೆ ನಡೆಸುತ್ತಿರುವ ಉಳ್ಳಾಲ ಪೊಲೀಸರಿಗೆ ವಿದ್ಯಾರ್ಥಿನಿ ಬಳಸುತ್ತಿದ್ದಳು ಎನ್ನಲಾದ ಸ್ಕೂಟರ್ ಸುರತ್ಕಲ್ ನಲ್ಲಿ ಪತ್ತೆಯಾಗಿದೆ. ಈ ಸ್ಕೂಟರ್ ವಿನೋದ ಎನ್ನುವ ಹೆಸರಿನಲ್ಲಿದೆ. ಸದ್ಯ ಸ್ಕೂಟರ್ ಅನ್ನ ಉಳ್ಳಾಲ ಪೋಲೀಸ್ ಠಾಣೆಗೆ ಕೊಂಡೊಯ್ದಿದ್ದಾರೆ.
    ಇನ್ನು ಫೆಬ್ರವರಿ 17 ರಂದು ಚೈತ್ರಾ ಸುರತ್ಕಲ್ ನ ಎಟಿಎಂ ನಿಂದ 30 ಸಾವಿರ ಡ್ರಾ ಮಾಡಿದ್ದಾರೆ. ಚೈತ್ರಾ ಪರಿಚಯಸ್ಥ ಶಾರೂಕ್ ಶೇಖ್‌ ಕೂಡ ಚೈತ್ರಾಳ ಜೊತೆ ತೆರಳಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಸದ್ಯ ಬೆಂಗಳೂರಿನಲ್ಲಿ ಇಬ್ಬರು ಇದ್ದರು ಮೊಬೈಲ್ ಸ್ವಿಚ್ಚ್ ಆಫ್ ಮಾಡಿಕೊಂಡಿರುವ ಕಾರಣದಿಂದ ಪೊಲೀಸರಿಗೆ ಇಬ್ಬರ ಲೋಕೇಷನ್ ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ . .ಸದ್ಯ ಬೆಂಗಳೂರಿನಲ್ಲಿ ಚೈತ್ರಾ ಇರುವ ಜಾಗದ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಚೈತ್ರಾ ಕರೆ ಮಾಡಿದ್ದು ಯಾರಿಗೆ? ಇರೋದು ಯಾರ ಜೊತೆ ಎಂಬ ಬಗ್ಗೆ ಅನುಮಾನ ಹೆಚ್ಚಾಗಿದೆ.

    ಸದ್ಯ ಪ್ರಕರಣದ ಬಗ್ಗೆ ಸಂಪೂರ್ಣ ‌ಮಾಹಿತಿ ಪಡೆದು ಉಳ್ಳಾಲ ಪೊಲೀಸರು ಬೆಂಗಳೂರಿಗೆ ಹೊರಟಿದ್ದಾರೆ. ಇನ್ನೆರಡು ದಿನಗಳಲ್ಲಿ ಚೈತ್ರಾ ಹೆಬ್ಬಾರ್ ನಾಪತ್ತೆ ರಹಸ್ಯ ಬಯಲಾಗಲಿದೆ ಎಂಬ ನಿರೀಕ್ಷೆ ಇದೆ. ಯುವತಿ ನಾಪತ್ತೆ ಪ್ರಕರಣ ಹಿಂದೆ ಲವ್ ಜಿಹಾದ್ ಹುನ್ನಾರ ಇದೆ ಎಂದು ಬಜರಂಗದಳ ಆರೋಪಿಸಿತ್ತು. ಚೈತ್ರಾ ಹೆಬ್ಬಾರ್ ನಾಪತ್ತೆ ಕೇಸನ್ನು ಸರ್ಕಾರ ಮತ್ತು ಇಲಾಖೆ ಗಂಭೀರವಾಗಿ ಪರಿಗಣಿಸಬೇಕು. ಸುಸಂಸ್ಕೃತ ಮನೆಯ ಹುಡುಗಿಯನ್ನು ಬ್ಲ್ಯಾಕ್​​ಮೇಲ್ ಮಾಡಿ ಹಾಗೂ ವಂಚಿಸಿ ಅಪಹರಣ ಮಾಡಲಾಗಿದೆ ಎಂದು ಬಜರಂಗದಳ ಕರ್ನಾಟಕ ಪ್ರಾಂತ ಸಹಸಂಚಾಲಕ ಮುರಳೀಕೃಷ್ಣ ಹಸಂತಡ್ಕ ಆರೋಪಿಸಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply