DAKSHINA KANNADA
ಪೆಟ್ರೊಲ್ ಡಿಸೇಲ್ ಬೆಲೆ ಏರಿಕೆ :DYFI ಪ್ರತಿಭಟನೆ
ಪೆಟ್ರೊಲ್ ಡಿಸೇಲ್ ಬೆಲೆ ಏರಿಕೆ: DYFI ಪ್ರತಿಭಟನೆ
ಮಂಗಳೂರು, ಸೆಪ್ಟೆಂಬರ್ 26 : ಕೇಂದ್ರ ಸರ್ಕಾರದ ಪೆಟ್ರೊಲ್ ಹಾಗೂ ಡಿಸೇಲ್ ಬೆಲೆ ಏರಿಕೆ ಖಂಡಿಸಿ ಡಿವೈಎಫ್ ಐ ಮಂಗಳೂರಿನಲ್ಲಿ ಪ್ರತಿಭಟನೆ ನಡೆಸಿತು.
ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ವರೆಗೆ ದ್ವಿಚಕ್ರ ವಾಹನಗಳನ್ನು ತಳ್ಳುವ ಕೈ ಗಾಡಿಗೆ ಕಟ್ಟಿ ಎಳೆ ತರುವ ಮೂಲಕ ಕೇಂದ್ರ ಸರ್ಕಾರದ ತೈಲ ಬೆಲೆ ಏರಿಕೆಯ ನೀತಿಯನ್ನು ಖಂಡಿಸಿದರು.
ಡಿ ವೈ ಏಫ್ ಐ ಪ್ರಮುಖರಾದ ಸುನೀಲ್ ಕುಮಾರ್ ಬಜಾಲ್,ನಿತಿನ್ ಕುತ್ತಾರ್, ಸಂತೋಷ್ ಕುಮಾರ್ ಬಜಾಲ್ ಸಹಿತ ಅನೇಕ ಪ್ರಮುಖರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ರೂಪಾಯಿ ಒಂದರಂತೆ ಈಗಾಗಲೇ ಅನೇಕ ರೂಪಾಯಿಗಳ ದರವನ್ನು ಪೆಟ್ರೋಲಿಯಂ ಕಂಪೆನಿಗಳು ಸದ್ದಿಲ್ಲದೆ ಸತತವಾಗಿ ಏರಿಸುವ ಮೂಲಕ ಜನ ಸಾಮಾನ್ಯರಿಗೆ ಬದುಕುವ ಹಕ್ಕನ್ನು ಕಿತ್ತಿದೆ ಎಂದು ಆರೋಪಿಸಿದರು.
ಆದರೆ ಕ್ರಮ ಕೈಗೊಳ್ಳಬೇಕಾದ ಕೇಂದ್ರ ಸರ್ಕಾರ ಮಾತ್ರ ಕಣ್ಣು ಮುಚ್ಚಿ ಕುಳಿತಿದೆ, ಬಡವರ ಹೊಟ್ಟೆ ಮೇಲೆ ಹೊಡೆಯುವ ಕೇಂದ್ರ ಸರ್ಕಾರಕ್ಕೆ ಮುಂದಿನ ಚುನಾವಣೆಯಲ್ಲಿ ಮತದಾರರೇ ಸರಿಯಾಗಿ ಬುದ್ದಿ ಕಲಿಸಲಿದ್ದಾರೆ ಎಂದರು.