KARNATAKA
10 ದಿನಗಳಲ್ಲಿ 9ನೇ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ

ಬೆಂಗಳೂರು ಮಾರ್ಚ್ 31: ದೇಶದಲ್ಲಿ ಮತ್ತೆ ಪೆಟ್ರೋಲ್ ಬೆಲೆ ಡಿಸೇಲ್ ಬೆಲೆ ಏರಿಕೆಯಾಗಿದ್ದು, ಕಳೆದ 10 ದಿನಗಳಲ್ಲಿ 9ನೇ ಬಾರಿ ಏರಿಕೆಯಾಗಿದ್ದು, ಗುರುವಾರವೂ ಪ್ರತಿ ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್‍ಗೆ 80 ಪೈಸೆ ಏರಿಕೆಯಾಗಿದೆ. ಒಟ್ಟಾರೆಯಾಗಿ ಒಂದೇ ವಾರದಲ್ಲಿ ಲೀಟರ್‌ಗೆ 6.40 ರೂ. ಏರಿಕೆಯಾಗಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 106.48 ರೂ. ಇದ್ದ ಪೆಟ್ರೋಲ್ ದರ 107.32 ರೂಪಾಯಿಗೆ ಏರಿಕೆಯಾಗಿದೆ. ಪ್ರತಿ ಲೀಟರ್‌ಗೆ 90.50 ರೂ. ಇದ್ದ ಡೀಸೆಲ್ ದರ ರೂ. 91.29ಕ್ಕೆ ಏರಿಕೆಯಾಗಿದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ 80 ಪೈಸೆ ಹೆಚ್ಚಳದೊಂದಿಗೆ ಪ್ರಸ್ತುತ ದರ ಲೀ.ಗೆ ₹101.81 ಗೆ ತಲುಪಿದೆ. ಡೀಸೆಲ್ ದರ ಲೀ.ಗೆ ₹93.07 ಇದೆ. ಮುಂಬೈನಲ್ಲಿ ಪೆಟ್ರೋಲ್ ಬೆಲೆಯು ಲೀಟರಿಗೆ ₹116.72 ಹಾಗೂ ಡೀಸೆಲ್ ಬೆಲೆಯು ₹100.94 ಕ್ಕೆ ಏರಿಕೆಯಾಗಿದೆ. ಸ್ಥಳೀಯ ಮಾರಾಟ ದರಕ್ಕೆ ಅನುಗುಣವಾಗಿ ರಾಜ್ಯದಿಂದ ರಾಜ್ಯಕ್ಕೆ ತೈಲ ದರದಲ್ಲಿ ವ್ಯತ್ಯಾಸ ಆಗುತ್ತದೆ.
