LATEST NEWS
ಮುಂಬೈನಲ್ಲಿ ಶತಕ ಭಾರಿಸಿದ ಪೆಟ್ರೋಲ್ ಬೆಲೆ…!!

ಮುಂಬೈ ಮೇ 29 : ಲಾಕ್ ಡೌನ್ ನಡುವೆ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಗಳು ಗಗನಕ್ಕೆ ಏರಿದ್ದು, ಮುಂಬೈನಲ್ಲಿ ಪೆಟ್ರೋಲ್ ಬೆಲೆ ಶತಕ ದಾಟಿದೆ. ಮೇ ತಿಂಗಳಿನಲ್ಲಿ ಇದುವರೆಗೆ ತೈಲ ಕಂಪೆನಿಗಳು ಪೈಸೆ ಪೈಸೆ ಲೆಕ್ಕದಲ್ಲಿ 15 ಬಾರಿ ಬೆಲೆ ಏರಿಕೆ ಮಾಡಿದೆ. ಇಂದು ಕೂಡ ಮತ್ತೆ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆಯಾಗಿದ್ದು, ಪೆಟ್ರೋಲ್ ಲೀಟರ್ಗೆ 25 ರಿಂದ 26 ಪೈಸೆ ಮತ್ತು ಡೀಸೆಲ್ ದರವನ್ನು ಲೀಟರ್ಗೆ 28 ರಿಂದ 30 ಪೈಸೆಗಳಿಗೆ ಏರಿಕೆ ಮಾಡಿವೆ. ಆ ಮೂಲಕ ಇಂದು ಶನಿವಾರ ಮತ್ತೆ ತೈಲ ದರಗಳು ಏರಿಕೆ ಆಗಿವೆ.
ಮುಂಬೈನಲ್ಲಿ ಇದೇ ಮೊದಲ ಬಾರಿಗೆ ಪೆಟ್ರೋಲ್ ಬೆಲೆ 100 ರೂಪಾಯಿಯ ಗಡಿ ದಾಟಿದ್ದು, ಇಂದಿನ ಬೆಲೆ ಏರಿಕೆ ಮೂಲಕ ಪೆಟ್ರೋಲ್ ಬೆಲೆ ಲೀಟರ್ಗೆ 100.19 ರೂಪಾಯಿಯಾದರೆ, ಡಿಸೇಲ್ ಬೆಲೆ ಲೀಟರ್ಗೆ 92.17 ರೂಪಾಯಿಯಾಗಿದೆ. ಇಂದು ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 93.94 ರೂಪಾಯಿಯಾದರೆ, ಡೀಸೆಲ್ ಬೆಲೆ ಲೀಟರ್ಗೆ 84.89 ರೂಪಾಯಿಯಾಗಿದೆ. ಇನ್ನು ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರ್ಗೆ 97.07 ರೂಪಾಯಿ ಮತ್ತು ಡೀಸೆಲ್ ದರ ಲೀಟರ್ಗೆ 89.99 ರೂಪಾಯಿಯಾಗಿದೆ. ಕೋಲ್ಕತಾದಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 93.97 ರೂಪಾಯಿಯಾದರೆ, ಡೀಸೆಲ್ ಬೆಲೆ ಲೀಟರ್ಗೆ 87.74 ರೂಪಾಯಿಯಾಗಿದೆ. ಚೆನ್ನೈನಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 95.51 ರೂಪಾಯಿಯಾದರೆ, ಡೀಸೆಲ್ ಬೆಲೆ ಲೀಟರ್ಗೆ 89.65 ರೂಪಾಯಿಯಾಗಿದೆ.
