LATEST NEWS
ಮತ್ತೆ ಪೆಟ್ರೋಲ್ ಮತ್ತು ಡಿಸೆಲ್ ಬೆಲೆ ಏರಿಕೆ.. ಫೆಬ್ರವರಿಯಲ್ಲಿ ಇದು 16ನೇ ಬಾರಿ
ನವದೆಹಲಿ ಫೆಬ್ರವರಿ 27: ದೇಶದಲ್ಲಿ ಜನವರಿಯಿಂದ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆಯಲ್ಲೆ ಸಾಗಿದ್ದು, ಜನವರಿ 1 ರಿಂದ ಪೆಟ್ರೋಲ್ ಬೆಲೆ 7.93 ರೂಪಾಯಿ ಏರಿಕೆಯಾಗಿದೆ. ಇನ್ನು ಇಂದು ಕೂಡ ಮತ್ತೆ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯಲ್ಲಿ ಏರಿಕೆಯಾಗುತ್ತಲೇ ಇದ್ದು, ಸದ್ಯ ಇದು ನಿಲ್ಲುವ ಲಕ್ಷಣ ಕಾಣಿಸುತ್ತಿಲ್ಲ.
ಸತತ ಮೂರು ದಿನಗಳಿಂದ ಸ್ಥಿರವಾಗಿದ್ದ ತೈಲ ಬೆಲೆಯಲ್ಲಿ ಶನಿವಾರ ಕೊಂಚ ಏರಿಕೆ ಕಂಡಿದೆ. ತೈಲ ಬೆಲೆ 15-24 ಪೈಸೆ ಏರಿಕೆಯಾಗಿದ್ದು, ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರಿಗೆ 91.17ರೂ ತಲುಪಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರೂಡ್ ಆಯಿಲ್ ಬೆಲೆ ಸಣ್ಣ ಮಟ್ಟದ ಏರಿಕೆಯನ್ನೇ ಬಂಡವಾಳವಾಗಿಸಿಕೊಂಡ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ನಿರಂತರವಾಗಿ ಹೆಚ್ಚಳ ಮಾಡುತ್ತಿದೆ. ತಿಂಗಳ ಆರಂಭದಲ್ಲಿ ಶುರುವಾದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳದ ಅಭಿಯಾನ ತಿಂಗಳ ಕೊನೆಯಲ್ಲೂ ನಿಂತಿಲ್ಲ. ಫೆಬ್ರವರಿ ತಿಂಗಳಲ್ಲಿ 16 ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸಲಾಗಿದೆ. ಕಳೆದ 16 ದಿನಗಳಿಂದ 4.97 ಪೈಸೆ ಬೆಲೆ ಹೆಚ್ಚಳ ಮಾಡಲಾಗಿದೆ.
ರಾಜಸ್ಥಾನದ ಶ್ರೀ ಗಂಗಾನಗರದಲ್ಲಿ ಕಳೆದ ವಾರ ಪೆಟ್ರೋಲ್ ಬೆಲೆ ನೂರರ ಗಡಿ ದಾಟಿತ್ತು. ಈಗಲೂ ಅಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 101.59 ಇದ್ದರೆ, ಡೀಸೆಲ್ ದರ ಲೀಟರ್‌ಗೆ 93.61 ರೂ ಇದೆ. ಹಾಗೆಯೇ ಮಧ್ಯಪ್ರದೇಶದ ಅನುಪ್ಪುರ್‌ನಲ್ಲಿ ಪೆಟ್ರೋಲ್ ದರ 101.34 ರೂ ಇದ್ದರೆ, ಡೀಸೆಲ್ 91.81 ರೂ.ಗೆ ಮಾರಾಟವಾಗುತ್ತಿದೆ. ಇದೀಗ ಈ ಬೆಲೆಗಳಲ್ಲಿ ಇನ್ನಷ್ಟು ಏರಿಕೆಯಾಗಲಿದೆ.
ದೇಶದ ವಿವಿಧ ನಗರಗಳಲ್ಲಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ವಿವರ ಹೀಗಿದೆ.
ಬೆಂಗಳೂರು- ಪೆಟ್ರೋಲ್ 94.22 ರೂ., ಡೀಸೆಲ್ 86.37 ರೂ.
ಮುಂಬೈ- ಪೆಟ್ರೋಲ್ 97.57 ರೂ., ಡೀಸೆಲ್ 88.60 ರೂ.ಜೈಪುರ – ಪೆಟ್ರೋಲ್ 97.72 ರೂ., ಡೀಸೆಲ್ 89.98 ರೂ.
ಚೆನ್ನೈ- ಪೆಟ್ರೋಲ್ 93.11 ರೂ., ಡೀಸೆಲ್ 86.45 ರೂ.
ಕೋಲ್ಕತ್ತಾ- ಪೆಟ್ರೋಲ್ 91.78 ರೂ., ಡೀಸೆಲ್ 84.56 ರೂ.
ದೆಹಲಿ- ಪೆಟ್ರೋಲ್ 91.17 ರೂ., ಡೀಸೆಲ್ 81.47 ರೂ.