DAKSHINA KANNADA
ಪ್ರಿಯಾಂಕ ಗಾಂಧಿ ಬಂದು ದೋಸೆ ಮಾಡಿದರೆ ಜನ ಮತ ಕೊಡೋಲ್ಲ: ಅಣ್ಣಾಮಲೈ

ಪುತ್ತೂರು, ಎಪ್ರಿಲ್ 29: ಪ್ರಿಯಾಂಕ ಗಾಂಧಿ ರಾಜ್ಯದಲ್ಲಿ ಬಂದು ದೋಸೆ ಮಾಡಿದರೆ ಜನ ಮತ ಕೊಡೋಲ್ಲ ಎಂದು ರಾಜ್ಯ ಬಿಜೆಪಿ ಚುನಾವಣಾ ಸಹ ಉಸ್ತುವಾರಿ ಕೆ.ಅಣ್ಣಾಮಲೈ ವ್ಯಂಗ್ಯವಾಡಿದ್ದಾರೆ.
ಕಾಂಗ್ರೇಸ್ ಈಶಾನ್ಯ ಭಾರತ, ಉತ್ತರ ಭಾರತ, ಮಧ್ಯ ಭಾರತ ಎಲ್ಲವನ್ನೂ ಬಿಟ್ಟು ಇದೀಗ ಕರ್ನಾಟಕದತ್ತ ಮುಖ ಮಾಡಿದೆ. ಬಿಜೆಪಿ ಸರಕಾರ ಉತ್ತಮ ಗುಣಮಟ್ಟದ ಹೆದ್ದಾರಿ, ಸೇತುವೆ, ಬಂದರು, ವಿಮಾನ ನಿಲ್ದಾಣಗಳನ್ನು ಮಾಡಿದೆ.

ಆದರೆ ಕಾಂಗ್ರೇಸ್ ಜನರ ಮುಂದೆ ಏನು ಮಾಡಿದೆ ಎಂದು ಹೇಳುತ್ತೇ? ಕೇವಲ ಪ್ರಿಯಾಂಕಾ ಗಾಂಧಿ ದೋಸೆ ಮಾಡಿದ್ದಾರೆ ಎಂದು ಜನತೆ ಮುಂದೆ ಹೇಳುತ್ತಾರಾ ಎಂದು ವ್ಯಂಗ್ಯವಾಡಿದರು.