LATEST NEWS
ಪಂಪ್ ವೆಲ್ ರಸ್ತೆಗೆ ನಳಿನ್ ಕಟೀಲ್ ಸೀಸನಲ್ ಲೇಕ್ ಎಂದು ಮರು ನಾಮಕರಣ ಮಾಡಿದ ನೆಟ್ಟಿಗರು

ಮಂಗಳೂರು ಜುಲೈ 05: ಗೂಗಲ್ ಮ್ಯಾಪ್ ನಲ್ಲಿ ಮಂಗಳೂರಿನ ಪ್ರಖ್ಯಾತ ಪಂಪ್ ವೆಲ್ ಪ್ಲೈಓವರ್ ನ ಕೆಳಗಿನ ರಸ್ತೆಯ ಹೆಸರನ್ನು ‘ನಳಿನ್ ಕಟೀಲ್ ಸೀಸನಲ್ ಲೇಕ್’ ಎಂದು ಬದಲಾಯಿಸಿ ಟ್ರೋಲಿಗರು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದು, ಇದೀಗ ಭಾರೀ ವೈರಲ್ ಆಗಿದೆ.
ಮಂಗಳೂರಿನ ಹೆಸರಾಂತ ಪಂಪ್ ವೆಲ್ ಪ್ಲೈಓವರ್ ತನ್ನ ನಿಧಾನಗತಿಯ ನಿರ್ಮಾಣದಿಂದಾಗಿ ವಿಶ್ವದಾದ್ಯಂತ ಹೆಸರು ಪಡೆದಿತ್ತು, ನಂತರ ಈ ಬಾರಿ ಮಳೆಗಾಲದಲ್ಲಿ ಮೊದಲ ಮಳೆಗೆ ಪಂಪ್ ವೆಲ್ ಪ್ಲೈಓವರ್ ಕೆಳ ರಸ್ತೆಯಲ್ಲಿ ನೀರು ನಿಂತು ಕೃತಕ ಕೆರೆ ನಿರ್ಮಾಣವಾಗಿ ಮತ್ತೆ ಸುದ್ದಿಯಾಗಿತ್ತು, ಈ ಸುದ್ದಿ ಟ್ರೋಲ್ ಪೇಜ್ ಗಳಲ್ಲಿ ಟ್ರೋಲ್ ಆಗಿ ಸಖತ್ ವೈರಲ್ ಆಗಿತ್ತು.

ಈಗ ಕೆಲವು ಟ್ರೋಲ್ ಪೇಜ್ ಗಳು ಗೂಗಲ್ ಮ್ಯಾಪ್ ನಲ್ಲಿ ಪಂಪ್‌ವೆಲ್ ಮೇಲ್ಸೇತುವೆಗೆ ‘ಪಂಪ್‌ವೆಲ್ – ದಿ ಗ್ರೇಟ್ ವಾಲ್ ಆಫ್ ಪಂಪ್‌ವೆಲ್’ ಎಂದು ಬದಲಾಯಿಸಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಅಲ್ಲದೆ ನೀರು ನಿಂತಿದ್ದ ಕೆಳ ರಸ್ತೆಯನ್ನು ನಳಿನ್ ಕಟೀಲ್ ಸೀಸನಲ್ ಲೇಕ್ ಎಂದು ಬದಲಾಯಿಸಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ.