LATEST NEWS
ಪಾಝಿಲ್ ಅಂತಿಮದರ್ಶನಕ್ಕೆ ಸೇರಿದ ಸಾವಿರಾರು ಜನರು….!!

ಮಂಗಳೂರು ಜುಲೈ 29: ನಿನ್ನೆ ದುಷ್ಕರ್ಮಿಗಳಿಂದ ಹತ್ಯೆಗೊಳಗಾಗಿದ್ದ ಯುವಕ ಫಾಜಿಲ್ ಮೃತದೇಹವನ್ನು ಸುರತ್ಕಲ್ನ ಮಂಗಳಪೇಟೆಗೆ ತರಲಾಗಿದೆ. ಮೃತದೇಹವನ್ನು ಮಂಗಳಪೇಟೆಯ ಮುಹಿದ್ದೀನ್ ಜುಮ್ಮಾ ಮಸೀದಿಗೆ ತರಲಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ದಾರೆ.
ಮರಣೋತ್ತರ ಪರೀಕ್ಷೆ ನಡೆದ ಆಸ್ಪತ್ರೆಯಿಂದ ವಾಹನದಲ್ಲಿ ಮೃತದೇಹವನ್ನು ಮಸೀದಿ ಆವರಣಕ್ಕೆ ತರಲಾಯಿತು. ಯಾವುದೇ ಮೆರವಣಿಗೆ ಇಲ್ಲದೆ, ಶಾಂತಿಯುತವಾಗಿ ಅಂತಿಮ ವಿಧಿಗಳನ್ನು ನೆರವೇರಿಸುತ್ತೇವೆ ಎಂದು ಮುಸ್ಲಿಂ ಮುಖಂಡರು ತಿಳಿಸಿದ್ದಾರೆ.
ಪೊಲೀಸರ ಸೂಚನೆಯಂತೆ ಶವ ಕೊಂಡೊಯ್ದ ಮಾರ್ಗದಲ್ಲಿ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿತ್ತು. ಸುರತ್ಕಲ್ ಪೇಟೆ ಸಹಜ ಸ್ಥಿತಿಯಲ್ಲಿದ್ದು, ಬಸ್ ಸಂಚಾರ ಎಂದಿನಂತೆ ಇದೆ.

ಕಳೆದ ರಾತ್ರಿ ಸುರತ್ಕಲ್ನಲ್ಲಿ ಅಂಗಡಿಯೊಂದರ ಮುಂದೆ ನಿಂತಿದ್ದ ಫಾಜಿಲ್ ಮೇಲೆ ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆಗೈದಿದ್ದರು. ದಾಳಿಯಿಂದ ಗಂಭೀರ ಗಾಯಗೊಂಡ ಆತನನ್ನು ಮಂಗಳೂರಿನ ಅಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಅದಾಗಲೇ ಮೃತಪಟ್ಟಿದ್ದ.