UDUPI
ಪೊಲೀಸ್ ವ್ಯವಸ್ಥೆಯಲ್ಲಿ ಆಧುನೀಕರಣ ಮತ್ತು ಸುಧಾರಣೆ ಅಗತ್ಯ
ಪೊಲೀಸ್ ವ್ಯವಸ್ಥೆಯಲ್ಲಿ ಆಧುನೀಕರಣ ಮತ್ತು ಸುಧಾರಣೆ ಅಗತ್ಯ
2025 ರ ವೇಳಗೆ ಪೊಲೀಸ್ ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆಗಳೊಂದಿಗೆ, ಆಧುನೀಕರಣಗೊಳ್ಳಬೇಕು ಎಂಬ ಅಭಿಪ್ರಾಯ, ಬುಧವಾರ ಮಣಿಪಾಲದಲ್ಲಿ ನಡೆದ ವಿಷನ್ 2025 ರ ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು.ಪೊಲೀಸ್ ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ಸುಧಾರಣೆ ಕುರಿತು, ಪ್ರೊ. ಬಾಲಕೃಷ್ಣ ಮದ್ದೋಡಿ ಮಾತನಾಡಿದರು.
ವಿದೇಶಗಳಲ್ಲಿ 1 ಮಿಲಿಯನ್ ನಾಗರೀಕರಿಗೆ 150 ರಿಂದ 200 ಮಂದಿ ಪೊಲೀಸ್ ಸಿಬ್ಬಂದಿ ಇದ್ದು, ರಾಜ್ಯದಲ್ಲಿ ಈ ಪ್ರಮಾಣ 15 ರಷ್ಠಿದೆ. ಜನಸಂಖ್ಯೆಗೆ ಅನುಗುಣವಾಗಿ ಪೊಲೀಸ್ ಸಿಬ್ಬಂದಿ ನೇಮಕಾತಿ ನಡೆಯಬೇಕು. ಉಡುಪಿ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯಲ್ಲಿ 60% ಮಂದಿ ಹೊರ ಜಿಲ್ಲೆಯವರಾಗಿದ್ದಾರೆ.
ಅವರು ವರ್ಗಾವಣೆ ಕೋರಿ ತಮ್ಮ ಜಿಲ್ಲೆಗಳಿಗೆ ಹೋಗುವುದರಿಂದ ಜಿಲ್ಲೆಯಲ್ಲಿ ಪೊಲೀಸ್ ಪ್ರಮಾಣ ಕಡಿಮೆಯಾಗಲಿದೆ, ನೇಮಕಗೊಂಡ ಕನಿಷ್ಠ 15 ವರ್ಷಗಳು ಜಿಲ್ಲೆಯಲ್ಲಿಯೇ ಸೇವೆ ಸಲ್ಲಿಸಬೇಕು ಎಂಬ ನಿಯಮ ಅಳವಡಿಸಬೇಕು. ಪೊಲೀಸರಿಗೆ ಹಾಗೂ ಪೊಲೀಸ್ ಸ್ಟೇಶನ್‍ಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು.
ಸೈಬರ್ ಅಪರಾಧ ತಡೆಗೆ ಪ್ರತ್ಯೇಕ ಸೈಬರ್ ಠಾಣೆ:
ಸೈಬರ್ ಅಪರಾಧ ತಡೆಗಟ್ಟಲು ಪ್ರತಿ ಪ್ರತ್ಯೇಕ ಸೈಬರ್ ಠಾಣೆ , ಪ್ರತಿ ತಾಲೂಕಿಗೆ ಒಂದು ಮಹಿಳಾ ಪೊಲೀಸ್ ಠಾಣೆ ಇರಬೇಕು, 10 ವರ್ಷಕ್ಕೋಮ್ಮೆ ಪೊಲೀಸ್ ಬಲ ಹೆಚ್ಚಿಸಬೇಕು. ಪೋಲೀಸ್ ಐಟಿ ವಿಭಾಗ ಮತ್ತು ಕೋರ್ಟ್ ನಡುವೆ ಇ ಕನೆಕ್ಟ್ ಪ್ರಾರಂಭಿಸಬೇಕು. ಪೊಲೀಸರಿಗೆ ಆಧುನಿಕ ಶಸ್ತ್ರಾಸ್ತ್ರಗಳು ಹಾಗೂ ವಾಹನಗಳನ್ನು ಒಗದಿಸಬೇಕು. ಆಯಕಟ್ಟಿನ ಜಾಗಗಳಲ್ಲಿ ಸಿಸಿಟಿವಿ ಅಳವಡಿಸಬೇಕು. ಎಲ್ಲಾ ವಲಯಗಳಲ್ಲಿ ಎಫ್‍ಎಸ್‍ಎಲ್ ಸೌಲಭ್ಯ ಒದಗಿಸಬೇಕು. ಏಕರೂಪ ಪೊಲೀಸ್ ವ್ಯವಸ್ಥೆ ಜಾರಿಗೆ ಬರಬೇಕು ಎಂದು ಹೇಳಿದರು.
ಕಾನೂನು ಸುವ್ಯವಸ್ಥೆಗೆ ಸಂಬಂಧಪಟ್ಟಂತೆ, ಹೆಚ್ಚುವರಿ ನ್ಯಾಯಾಲಯಗಳ ಹಾಗೂ ಸಿಬ್ಬಂದಿಗಳ ನಿಯೋಜನೆ ಆಗಬೇಕು. ಸಣ್ಣ ಪುಟ್ಟ ಪ್ರಕರಣಗಳು ಶೀಘ್ರ ವಿಲೇವಾರಿ ಆಗಬೇಕು. ಇಂಗ್ಲೆಂಡ್ ಮಾದರಿಯ ಜ್ಯೂರಿ ವ್ಯವಸ್ಥೆ ಅಳವಡಿಕೆಯಾಗಬೇಕು. ತಾಲೂಕಿಗೆ ಒಂದು ಕೋರ್ಟ್ ಸ್ಥಾಪನೆಯಾಗಬೇಕು. ದಂಡ ವಿಧಿಸುವ ಪ್ರಮಾಣ ಅಧಿಕವಾಗಬೇಕು.
ಎಲ್ಲಾ ವಾಹನಗಳಿಗೆ ಜಿಪಿಎಸ್ ಅಳವಡಿಸುವುದರಿಂದ ಅಪಘಾತ ಪ್ರಕರಣಗಳ ಪತ್ತೆ ಸುಲಭವಾಗಲಿದೆ. ಅಪರಾಧಿಗಳಿಗಾಗಿ ಜಿಲ್ಲೆಗೆ ಒಂದರಂತೆ ಪುರ್ನವಸತಿ ಕೇಂದ್ರ ಆರಂಭವಾಗಬೇಕು. ನ್ಯಾಯಾಂಗ ವಿಚಾರಣೆ. ಪ್ರಕರಣಗಳ ತನಿಖೆಯಲ್ಲಿ ಮಾಧ್ಯಮಗಳಿಗೆ ಸ್ಪಷ್ಟ ನಿರ್ಬಂಧ À ಹಾಕಬೇಕು. ಸಾಧ್ಯವಾದಲ್ಲಿ ಪೊಲೀಸ್ ಠಾಣೆಗಳ ಹೆಸರನ್ನು ತೆರದ ಬಾಗಿಲು ಅಥವಾ ಸಂತಸದ ಮನೆ ಎಂದು ಬದಲಾಯಿಸಿ ಎಂದು ಪ್ರೊ.ಮದ್ದೋಡಿ ಹೇಳಿದರು.
ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ಆದ್ಯತೆ:
ಸಭೆಯಲ್ಲ್ಲಿ ನಡೆದ ಸಂವಾದದಲ್ಲಿ, ಜನಸ್ನೇಹಿ ಪೊಲೀಸ್ ವ್ಯವಸ್ಥೆ ರೂಪುಗೊಳ್ಳಬೇಕು, ಪೊಲೀಸರಿಗೆ ವಾರಾಂತ್ಯದಲ್ಲಿ ಕಡ್ಡಾಯವಾಗಿ ಯೋಗ ಅಥವಾ ಮಾನಸಿಕ ಒತ್ತಡ ಕಡಿಮೆ ಮಾಡುವ ವ್ಯಾಯಾಮ ಅಳವಡಿಸಿಕೊಳ್ಳಬೇಕು. ಪೊಲೀಸ್ ಜನಸಂಪರ್ಕ ಸಭೆಗಳು ನಡೆಯಬೇಕು, ಒಟ್ಟಿನಲ್ಲಿ ಮಕ್ಕಳಿಂದ ಹಿರಿಯವರವರೆಗೆ ನೊಂದವರಿಗೆ ಪರಿಹಾರ ಒದಗಿಸುವ ಕೇಂದ್ರಗಳನ್ನಾಗಿ ಪೊಲೀಸ್ ಠಾಣೆಗಳು ರೂಪುಗೊಳ್ಳಬೇಕು ಎಂದು ಅಭಿಪ್ರಯ ವ್ಯಕ್ತವಾಯಿತು.