ಪಡಿತರ ಪಡೆಯಲು ಸಾಮಾಜಿಕ ಅಂತರ ಮರೆತ ಜನರು

ಮಂಗಳೂರು ಎಪ್ರಿಲ್ 3: ರಾಜ್ಯ ಸರಕಾರ ಲಾಕ್ ಡೌನ್ ಹಿನ್ನಲೆಯಲ್ಲಿ ಎರಡು ತಿಂಗಳ ಪಡಿತರ ಒಂದೇ ಬಾರಿಗೆ ನೀಡುತ್ತಿದ್ದು, ಈಗಾಗಲೇ ಪಡಿತರ ಹೊಂದಿರುವವರ ಮೊಬೈಲ್ ಗಳಿಗೆ ಪಡಿತರ ಪಡೆಯಲು ಮೆಸೇಜ್ ಗಳು ಬರಲಾರಂಭಿಸಿದೆ.

ಆದರೆ ಈ ಪಡಿತರ ಪಡೆಯಲು ಆಗಮಿಸುವ ಜನತೆ ಮಾತ್ರ ರೇಷನ್ ಪಡೆದುಕೊಳ್ಳುವ ಭರದಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಮರೆತಿರುವ ಘಟನೆ ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ನಡೆದಿದೆ.

ಕುಂದಾಪುರದ ಮುಖ್ಯರಸ್ತೆಯಲ್ಲಿರುವ ನ್ಯಾಯಬೆಲೆ ಅಂಗಡಿಯಲ್ಲಿ ಈ ಘಟನೆ ನಡೆದಿದ್ದು, ಇಂದು ಪಡಿತರ ವಸ್ತುಗಳನ್ನು ಪಡೆಯಲು ಬಂದ ಸಾರ್ವಜನಿಕರು ಮುಖಕ್ಕೆ ಮಾಸ್ಕ್ ಧರಿಸಿ ಒಬ್ಬರಿಗೊಬ್ಬರು ತಾಗಿಕೊಂಡು ನಿಂತು ಸರತಿಗಾಗಿ ಕಾಯುತ್ತಿರುವ ದೃಶ್ಯ ಕಂಡು ಬಂದಿದೆ.

ಉಡುಪಿ ಜಿಲ್ಲಾಡಳಿತ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಖಡಕ್ ಆದೇಶ ನೀಡಿದ್ದರೂ ಕೂಡ ಇಲ್ಲಿ ಅದನ್ನು ಸುಕ್ಷಿತ ಜನರೇ ಗಾಳಿ ತೂರಿದ್ದಾರೆ. ಇದು ಭಾರಿ ಅಪಾಯಕಾರಿಯಾಗಿದೆ. ಕುಂದಾಪುರ ಮಿನಿ ವಿಧಾನ ಸೌಧದಿಂದ ಕೆಲವೇ ದೂರದಲ್ಲಿ ಈ ನ್ಯಾಯ ಬೆಲೆ ಅಂಗಡಿ ಇದ್ದು, ಯಾವುದೇ ಸರಕಾರಿ ಅಧಿಕಾರಿಗಳಾಗಿ ಪೊಲೀಸರು ಈ ಸ್ಥಳದಲ್ಲಿ ಕಾಣಸಿಗಲ್ಲಿಲ. ಈ ಹಿನ್ನಲೆ ಜನ ಸಾಮಾಜಿಕ ಅಂತರದ ಪರಿವೇ ಇಲ್ಲದೇ ಪಡಿತರ ಪಡೆಯುತ್ತಿವುದು ಇದರಿಂದ ಭಾರಿ ಬೆಲೆ ತೆರಬೇಕಾದ ಸಂಭವವಿದೆ.