LATEST NEWS
ಪೇಜಾವರ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ದೆಹಲಿ ಏಮ್ಸ್ ವೈದ್ಯರ ಜೊತೆ ಸಂಪರ್ಕದಲ್ಲಿರುವ ಮಣಿಪಾಲ ವೈದ್ಯರು

ಪೇಜಾವರ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ದೆಹಲಿ ಏಮ್ಸ್ ವೈದ್ಯರ ಜೊತೆ ಸಂಪರ್ಕದಲ್ಲಿರುವ ಮಣಿಪಾಲ ವೈದ್ಯರು
ಉಡುಪಿ ಡಿಸೆಂಬರ್ 23: ಉಸಿರಾಟದ ತೊಂದರೆಯಿಂದಾಗಿ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪೇಜಾವರ ಶ್ರೀಗಳ ಆರೋಗ್ಯ ಸ್ಥಿರವಾಗಿದೆ ಎಂದು ಮಣಿಪಾಲ ಆಸ್ಪತ್ರೆ ತಿಳಿಸಿದೆ.
ಪೇಜಾವರಶ್ರೀಗಳ ಹೆಲ್ತ್ ಬುಲೆಟಿನ್ ನ್ನು ಮಣಿಪಾಲ ಆಸ್ಪತ್ರೆ ಬಿಡುಗಡೆ ಮಾಡಿದ್ದು, ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯ ಇಬ್ಬರು ತಜ್ಞ ವೈದ್ಯರು ಮಣಿಪಾಲಕ್ಕೆ ಬಂದಿದ್ದು, ಮಣಿಪಾಲ ವೈದ್ಯರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಈ ನಡುವೆ ಕೆಎಂಸಿ ವೈದ್ಯರ ತಂಡದ ಜೊತೆ ಏಮ್ಸ್ ವೈದ್ಯರು ಚರ್ಚಿಸಿದ್ದಾರೆ. ಸದ್ಯ ಪೇಜಾವರಶ್ರೀ ಆರೋಗ್ಯ ಸ್ಥಿರವಾಗಿದ್ದು, ಶ್ರೀಗಳ ದೇಹದ ರಕ್ತ ಸಂಚಾರ ಸಹಜವಾಗಿದೆ. ಶ್ರೀಗಳಿಗೆ ಕೃತಕ ಉಸಿರಾಟ ವ್ಯವಸ್ಥೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ.

ಈ ನಡುವೆ ಪೇಜಾವರ ಶ್ರೀಗಳ ಆರೋಗ್ಯ ವಿಚಾರಿಸಲು ಉಡುಪಿಯ ಬಿಷಪ್ ಡಾ.ಜೆರಾಲ್ಡ್ ಐಸಾಕ್ ಲೋಬೋ ಆಸ್ಪತ್ರೆಗೆ ಭೇಟಿ ನೀಡಿದರು. ನಂತರ ಮಾತನಾಡಿದ ಅವರು ಶೀಘ್ರ ಸ್ವಾಮೀಜಿಗಳು ಗುಣಮುಖರಾಗಲಿ ಎಂದು ನಾವು ಪ್ರಾರ್ಥಿಸುತ್ತಿದ್ದೇವೆ. ಮತ್ತೆ ಅವರು ಕೃಷ್ಣನ ಪೂಜೆ ಮಾಡುವಂತಾಗಬೇಕು ಎಂದರು. ಸ್ವಾಮಿಜಿಗಳ ಜೊತೆ ಏಳು ವರ್ಷಗಳಿಂದ ಒಡನಾಟ ಇಟ್ಟುಕೊಂಡಿದ್ದು, ಉತ್ತಮ ಬಾಂಧವ್ಯವನ್ನು ಬೆಳೆಸಿಕೊಂಡಿದ್ದೇವೆ ಎಂದರು.
ಪೇಜಾವರ ಶ್ರೀಗಳ ಆರೋಗ್ಯ ವಿಚಾರಿಸಲು ಮಾಜಿ ಕೇಂದ್ರ ಸಚಿವೆ ಪೇಜಾವರ ಶ್ರೀಗಳ ಶಿಷ್ಯೆ ಉಮಾ ಭಾರತಿ ಇಂದು ಉಡುಪಿಗೆ ಆಗಮಿಸಿದರು. ವೀಲ್ ಚಯರ್ ನಲ್ಲಿ ಬಂದು ಶ್ರೀಗಳ ಆರೋಗ್ಯ ವಿಚಾರಿಸಿದರು.