Connect with us

    UDUPI

    ಇದು ಕೋಳಿ ಮತ್ತು ನವಿಲು ನಡುವಿನ ಕಾಳಗ…..!!

    ಕುಂದಾಪುರ : ಟಗರು ಪೈಟ್…ಬುಲ್ ಪೈಟ್ ಕೂಡಾ ನೋಡಿರ್ತೀರಿ..ಹೆಚ್ಯಾಕೆ ಕೋಳಿ ಕಾಳಗ ನೋಡದವರುಂಟೇ. ಆದರೆ ವಯ್ಯಾರಕ್ಕೆ ಹೆಸರಾದ ನವಿಲಿನ ಕಾಳಗ ನೋಡಿದೀರಾ? ಕೇಳಿದೀರಾ? ಉಡುಪಿಯಲ್ಲಿ ಒಂದು ವಿಚಿತ್ರ ಕುಕ್ಕುಟ ಫೈಟ್ ನಡೆದಿದೆ. ಸ್ವತ ನವಿಲೇ ಫೈಟ್ ಗೆ ಇಳಿದಿದೆ.ಅದೂ ತನ್ನ ಸರಿಸಮರ ಜೊತೆಗಲ್ಲ. ಕೋಳಿ‌ ಜೊತೆ ಕಾಳಗ ಮಾಡ್ತಿದೆ.ಈ ದೃಶ್ಯ ನೋಡಿದ್ರೆ ಆ ಗಾದೆ ನೆನಪಾಗುತ್ತೆ. ತಲೆ ಗಟ್ಟಿ ಇದೆ ಅಂತ ಬಂಡೆ ಜೊತೆಗೆ ಗುದ್ದಾಟ ಮಾಡಬಾರದು ಅಂತಾರಲ್ವಾ ಹಾಗಾಯ್ತು ಈ ಕೋಳಿ ಕಥೆ. ಇನ್ನೊಂದು ‌ಹುಂಜದ ಜೊತೆಗೆ ಕಾಲ್ ಕೆರೆದು‌ ಕಾದಾಡೊ ಬದಲು..ನವಿಲಿನ ಜೊತೆಗೆ ಪೈಟ್ ಮಾಡುತ್ತಿದೆ.


    ಗುಂಪು ಕಟ್ಟಿಕೊಂಡು‌ ಹೆಣ್ಣು ಕೋಳಿಗೆ‌ ಗಿರಕಿ ಹೊಡೆದುಕೊಂಡು ಸುತ್ತಾಡುತ್ತಿದ್ದ ಹುಂಜಕ್ಕೂ ಬೋರ್ ಆಗಿರ್ಬೇಕು. ಡೀಪರೆಂಟಾಗಿರ್ಲಿ ಅಂತ ಹುಂಜದ ಜೊತೆಗೆ ಪೈಟ್ ಮಾಡೊದು ಬಿಟ್ಟು ತನ್ನ ಶಕ್ತಿ ಪ್ರದರ್ಶನ ತೋರಿಸೊಕೆ ನವಿಲಿನ ಜೊತೆಗೆ ಪೈಟ್ ಶುರು ಮಾಡಿಕೊಂಡಿದೆ.

    ಮಳೆ ಬಂದ್ರೆ ಗರಿಬಿಚ್ಚಿ ಕುಣಿದು ಹೆಣ್ಣು ನವಿಲುನ್ನು ರಮೀಸುವುದ್ರಲ್ಲಿ ಬಿಜಿಯಾಗುವ ಮಯೂರ ಕೂಡಾ, ನರ್ತನಸೇವೆ ಬಿಟ್ಟು ಕುಕ್ಕುಟದ ಜೊತೆಗೆ ‌ಕಾದಾಡುವುದರಲ್ಲಿ‌ ಮೈ ಮರೆತಿದೆ…ಕೋಳಿ ಜಗಳ ನೋಡಿದೆವೆ ಕೇಳಿದೇವಿ ಅದ್ರೆ ಕುಂದಾಪುರ ಭಾಗದ ವ್ಯಕ್ತಿ ಯೊಬ್ಬರ‌ ಮನೆ‌ ಮುಂದೆ ನಡೆದ ನವಿಲು ಕೋಳಿ ಕಾಳಗ ನೋಡುತ್ತಿದ್ದ ಮಂದಿಯನ್ನು ಆಶ್ಚರ್ಯ ಚಕಿತರಾನಾಗಿಸಿದೆ. ತನಗಿಂತ ಬಲಿಷ್ಠ ಗಾತ್ರದ ನವಿಲಿನ ಜೊತೆಗೆ ಕಾದಾಡಿದ ಹುಂಜನಿಗೆ ಕೆಲವರು ಶಬಾಷ್ ಅಂದ್ರೆ.. ಹುಂಜನಿಗೆ ತಿಂದದ್ದು ಕೊಬ್ಬು ಅಂತಾ ಹಲವರು ಮೂಗುಮುರಿದ್ರು.

    Share Information
    Advertisement
    Click to comment

    You must be logged in to post a comment Login

    Leave a Reply