Connect with us

DAKSHINA KANNADA

ಮಲೇಷಿಯಾದ ಅಂತರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಫೈಟಿಂಗ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಪವನ್ ಕುಮಾರ್

ಮಲೇಷಿಯಾದ ಅಂತರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಫೈಟಿಂಗ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಪವನ್ ಕುಮಾರ್

ಪುತ್ತೂರು ಸೆಪ್ಟೆಂಬರ್ 9: ಮಲೇಷಿಯಾದಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಕರಾಟೆಯಲ್ಲಿ ಪವನ್ ಕುಮಾರ್ ಫೈಟಿಂಗ್ ವಿಭಾಗದಲ್ಲಿ ಪ್ರಥಮ ಹಾಗೂ ‘ಕಟಾ’ ದಲ್ಲಿ ತೃತೀಯ ಮೆಡಲ್ ಪಡೆದಿದ್ದಾನೆ.

‘ಒಕಿನವನ್ ಗೊಜು-ರ್ಯು ಕರಾಟೆ ಮಲೈಷಿಯಾ ಆಶ್ರಯದಲ್ಲಿ ಮಲೈಷಿಯಾದಲ್ಲಿ ನಡೆದ 2019ನೇ ಸಾಲಿನ ಅಂತಾರಾಷ್ಟ್ರೀಯ ಕರಾಟೆ- ಡು ಓಪನ್ ಚಾಂಪಿಯನ್ ಶಿಪ್ ನಲ್ಲಿ ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಸುರೇಶ್ ಸುವರ್ಣ ಹಾಗೂ ಅನುಸೂಯ ಅವರ ಪುತ್ರ ಪವನ್ ಕುಮಾರ್  ರವರು ‘ಫೈಟಿಂಗ್’ ಇವೆಂಟ್ ನಲ್ಲಿ ಪ್ರಥಮ ಮೆಡಲ್ ಹಾಗೂ ‘ಕಟಾ’ ಇವೆಂಟ್ ನಲ್ಲಿ ತೃತೀಯ ಮೆಡಲ್ ಗಳಿಸಿದ್ದು, ರಾಷ್ಟ್ರಕ್ಕೆ ಹೆಮ್ಮೆ ತಂದು ಕೊಟ್ಟಿದ್ದಾರೆ. ಈ ಸ್ಪರ್ಧೆ ಯಲ್ಲಿ ಮಲೇಷಿಯಾ, ಜಪಾನ್, ಶ್ರೀಲಂಕಾ, ನೇಪಾಳ ಹೀಗೇ ಒಟ್ಟು 12 ದೇಶದ ಸ್ಪರ್ದಿಗಳು ಭಾಗವಹಿಸಿದ್ದರು.

ಈ ಹಿಂದೆಯೂ ಹಲವಾರು ಪ್ರಶಸ್ತಿ ಮೆಡಲ್ ಗಳನ್ನು ತಮ್ಮ ಮುಡಿಗೇರಿಸಿಕೊಂಡ ಇವರು ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆಯಾಗಿದ್ದರು. ಈ ಮೊದಲು ಪವನ್ ಕುಮಾರ್ ಗೋವಾದಲ್ಲಿ 2017ರಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ 2 ದ್ವಿತೀಯ ಹಾಗೂ  1 ತೃತಿಯ ಸ್ಥಾನ ವನ್ನು ಪಡೆದಿದ್ದಾರೆ. ಮತ್ತು ಮಂಗಳೂರಿನಲ್ಲಿ ನಡೆದ  2016 – 2017 -2018 ಸಾಲಿನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ,ದ್ವೀತಿಯ ,ಹಾಗೂ ತ್ರತೀಯ ಸ್ಥಾನವನ್ನು ಪಡೆದಿದ್ದಾರೆ. 2018 ರಲ್ಲಿ ಮ್ರೆಸೂರಿನಲ್ಲಿ ನಡೆದ  ‘ ಮಾಬುನಿ ಕಫ್ ‘ ಕರಾಟೆ ಸ್ಪರ್ಧೆಯಲ್ಲಿ ಕೂಡ ಭಾಗವಹಿಸಿದ್ದಾರೆ.

ಕೇಪು ಕಲ್ಲಂಗಳ ಸರಕಾರಿ ಪ್ರೌಢಶಾಲೆಯ 9 ನೇ ತರಗತಿಯಲ್ಲಿ ಕಲಿಯುತ್ತಿರುವ ಇವರು ಈ ಹಿಂದೆ ನಡೆದ ಹಲವಾರು ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಚಿನ್ನ, ಬೆಳ್ಳಿ ಮೆಡಲ್ ಪಡೆದಿದ್ದರು. ಮಾಧವ ಅಳಿಕೆ ಯವರಿಂದ ಕರಾಟೆ ತರಬೇತಿ ಪಡೆಯುತ್ತಿದ್ದಾರೆ.ಹಾಗೂ ಯಜ್ಞೇಶ್ ಸಸಿಹಿತ್ತಲು,ವಿಶ್ವ ಬಿಲ್ಲವರ ಸೇವಾ ಚಾವಡಿ ಮತ್ತು ಕೊಣಾಜೆ ಯುವನ ಟ್ರಸ್ಟ್  ಸಂಸ್ಥೆ ಹಾಗೂ ಕೇಪು ಕಲ್ಲಂಗಳ ಸರಕಾರಿ ಪ್ರೌಢಶಾಲೆ ಶಾಲಾ ಮುಖ್ಯ ಶಿಕ್ಷಕಿ ಮಾಲತಿ.ಕೆ, ಶಾಲಾ ಶಿಕ್ಷಕ ವೃಂದ,ದವರು ಧನಸಹಾಯ ನೀಡುವ ಮೂಲಕ ಈ ಪ್ರತಿಭೆ ಗೆ ಪ್ರೋತ್ಸಾಹಿಸಿದ್ದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *