LATEST NEWS
ಡಿಕೆಶಿ ಶೀಘ್ರ ಬಿಡುಗಡೆಗಾಗಿ ಕೊಲ್ಲೂರಿನಲ್ಲಿ ಚಂಡಿಕಾ ಹೋಮ ನಡೆಸಿದ ಕುಟುಂಬಸ್ಥರು
ಡಿಕೆಶಿ ಶೀಘ್ರ ಬಿಡುಗಡೆಗಾಗಿ ಕೊಲ್ಲೂರಿನಲ್ಲಿ ಚಂಡಿಕಾ ಹೋಮ ನಡೆಸಿದ ಕುಟುಂಬಸ್ಥರು
ಉಡುಪಿ ಸೆಪ್ಟೆಂಬರ್ 9: ಇಡಿ ಬಂಧನದಲ್ಲಿರುವ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಶೀಘ್ರ ಬಿಡುಗಡೆ ಆಗುವಂತೆ ಡಿಕೆಶಿ ಕುಟುಂಬಸ್ಥರು ಕೊಲ್ಲೂರು ಶ್ರೀಮೂಕಾಂಬಿಕಾ ಕ್ಷೇತ್ರದಲ್ಲಿ ಚಂಡಿಕಾಹೋಮ ನಡೆಸಿದ ಮೂಕಾಂಬಿಕಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಕಳೆದ ನಾಲ್ಕು ದಿನಗಳಿಂದ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ಇಡಿ ವಿಚಾರಣೆ ನಡೆಸುತ್ತಿದ್ದು ರಜೆ ದಿನವಾದ ಭಾನುವಾರ ಕೂಡ ಇಡಿ ವಿಚಾರಣೆ ನಡೆಸಿದ್ದಾರೆ. ಈ ನಡುವೆ ಇಡಿ ಬಂಧನದಿಂದ ಡಿಕೆಶಿ ಶೀಘ್ರ ಬಿಡುಗಡೆಯಾಗಬೇಕೆಂದು ದೇವರ ಮೊರೆ ಹೋಗಲಾಗುತ್ತಿದೆ.
ಚಂಡಿಕಾ ಹೋಮದ ಹರಕೆಯನ್ನು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೊಂಡಿದ್ದರು ಎನ್ನಲಾಗಿದೆ. ಲಕ್ಷ್ಮೀ ಹೆಬ್ಬಾಳ್ಕರ್ ಆಪ್ತ ಕಾರ್ಯದರ್ಶಿ ಚಂಡಿಕಾಹೋಮ ಬುಕ್ಕಿಂಗ್ ಮಾಡಿದ್ದರು.
ಇಂದು ಡಿಕೆಶಿ ದೊಡ್ಡಪ್ಪ, ಚಿಕ್ಕಪ್ಪನ ಕುಟುಂಬದವರು ಉಡುಪಿ ಜಿಲ್ಲೆಯ ಹೆಸರಾಂತ ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದಲ್ಲಿ ಚಂಡಿಕಾಹೋಮ ನಡೆಸಿದರು. ಕಾಂಗ್ರೇಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೊಂಡಿರುವ ಹರಕೆ ಇದಾಗಿದ್ದು, ಈ ಹಿನ್ನಲೆಯಲ್ಲಿ ಕೊಲ್ಲೂರು ದೇವಸ್ಥಾನದಲ್ಲಿ ಡಿಕೆಶಿ ಫೋಟೋ ಮುಂದಿಟ್ಟು ಚಂಡಿಕಾಹೋಮ ನಡೆಸಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ನ ಪದಾಧಿಕಾರಿಗಳು, ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಮುಖರು ಭಾಗಿಯಾಗಿದ್ದರು.