Connect with us

    KARNATAKA

    ಬೆಳಗಾವಿ : ಬಸ್ಸಿನಲ್ಲಿ ಕುಳಿತಲ್ಲೇ ಸದ್ದಿಲ್ಲದ ಹೃದಯಾಘಾತಕ್ಕೆ ಪ್ರಯಾಣಿಕ ಬಲಿ..!

    ಬೆಳಗಾವಿ : ಬಸ್ಸಿನಲ್ಲಿ ಕುಳಿತಲ್ಲೇ ಸದ್ದಿಲ್ಲದ ಹೃದಯಾಘಾತಕ್ಕೆ ಪ್ರಯಾಣಿಕ ಬಲಿಯಾದ ಘಟನೆ  ಇಂದು ಸೋಮವಾರ ಬೆಳಿಗ್ಗೆ ಧಾರವಾಡದಿಂದ ದಾಂಡೇಲಿ ಗೆ ಬರುತ್ತಿದ್ದ ಬಸ್ಸಿನಲ್ಲಿ ನಡೆದಿದೆ.

    ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಮದ್ದೂರು ಗ್ರಾಮದ ಕಲ್ಲೋಳಿಯವರ ಓಣಿ ನಿವಾಸಿಯಾಗಿರುವ 57 ವರ್ಷ ವಯಸ್ಸಿನ ಪುಂಡಲಿಕ್ ಚಂದರಗಿ ಎಂಬವರೇ ಹೃದಯಘಾತಕ್ಕೊಳಗಾದ ಪ್ರಯಾಣಿಕರಾಗಿದ್ದಾರೆ.  ಧಾರವಾಡದಿಂದ ಸಾರಿಗೆ ಬಸ್ಸಿನಲ್ಲಿ ದಾಂಡೇಲಿಗೆ ಬರುತ್ತಿದ್ದ ಸಂದರ್ಭ ಪುಂಡಲೀಕ್‌ಗೆ  ಹೃದಯಾಘಾತವಾಗಿದೆ. ದಾಂಡೇಲಿಗೆ ಬಸ್ ಬರುತ್ತಿದ್ದಂತೆಯೇ ಬಸ್ ನಿಲ್ದಾಣದಲ್ಲಿ ಇನ್ನಿತರ ಪ್ರಯಾಣಿಕರು ನಿರ್ವಾಹಕರಿಗೆ ಮಾಹಿತಿಯನ್ನು ನೀಡಿದ್ದಾರೆ. ಕುಳಿತಲ್ಲೇ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಇವರು ಏನು ಮಾಡಿದರೂ ಎಚ್ಚರಗೊಳ್ಳದಿದ್ದಾಗ ಬಸ್ಸಿನ ನಿರ್ವಾಹಕ ತಕ್ಷಣವೇ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ಮಾಹಿತಿ‌ ನೀಡಿದ್ದಾರೆ. ಸಾರಿಗೆ ಸಂಸ್ಥೆಯ ಅಧಿಕಾರಿಗಳು ಸಾರ್ವಜನಿಕ ಆಸ್ಪತ್ರೆಗೆ ಮಾಹಿತಿಯನ್ನು ನೀಡಿ ಆಂಬುಲೆನ್ಸ್ ತರಿಸಿ ಆಸ್ಪತ್ರೆಗೆ ಕರೆದೊಯ್ದದೂ  ಬದುಕಲಿಲ್ಲ ಎನ್ನಲಾಗಿದೆ.  ಸ್ಥಳಕ್ಕೆ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *