DAKSHINA KANNADA
ಪಕ್ಷದ ಜವಾಬ್ದಾರಿ ಯಾವುದೇ ವ್ಯಕ್ತಿಯ ಮನೆತನದ ಆಸ್ತಿಯಲ್ಲ: ನಳಿನ್ ಕುಮಾರ್ ಕಟೀಲ್

ಪುತ್ತೂರು, ನವೆಂಬರ್ 28: ಪಕ್ಷದ ಜವಾಬ್ದಾರಿ ಯಾವುದೇ ವ್ಯಕ್ತಿಯ ಮನೆತನದ ಆಸ್ತಿಯಲ್ಲ, ಬಿಜೆಪಿ ವ್ಯಕ್ತಿ ಆಧಾರಿತ ಪಾರ್ಟಿಯೂ ಅಲ್ಲ ಎಂದು ಮಾಜಿ ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಪುತ್ತೂರಿನಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್, ರಾಜ್ಯಾಧ್ಯಕ್ಷನಾಗಿ ಪಕ್ಷ ಕೊಟ್ಟ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಗುಂಪುಗಾರಿಕೆಗೆ ಅವಕಾಶ ನೀಡದೆ ಸಂಘಟನೆಯನ್ನು ಬೆಳೆಸಿದ್ದೇನೆ, ಪಕ್ಷದ ಹೆಸರಿನಲ್ಲಿ ವೈಯಕ್ತಿಕ ಪ್ರಚಾರ ತೆಗೆದುಕೊಂಡಿಲ್ಲ, ಬಿಜೆಪಿ ವ್ಯಕ್ತಿ ಆಧಾರಿತ ಪಕ್ಷವಲ್ಲ, ವಿಚಾರ ಆಧಾರಿತ ಪಕ್ಷ.

ನಳಿನ್ ಕುಮಾರ್ ಪಕ್ಷದ ಮುಂದೆ ಶೂನ್ಯ, ಯಾವತ್ತೂ ಪಕ್ಷವೇ ಮುಖ್ಯ, ಜವಾಬ್ದಾರಿ ನನ್ನಲ್ಲೇ ಇರಬೇಕು ಎನ್ನಲು ಪಕ್ಷ ಯಾರದ್ದೇ ಮನತನದ ಆಸ್ತಿಯೂ ಅಲ್ಲ, ನನ್ನ ಮನೆತನ, ನನ್ನ ರಕ್ತದಲ್ಲಿ ಎಂದಿಗೂ ರಾಜಕಾರಣ ಕಾಣುವುದಿಲ್ಲ, ರಾಜಕಾರಣ ಮಾಡಲು ನಾನು ರಾಜಕೀಯಕ್ಕೆ ಬಂದಿರುವವನೂ ಅಲ್ಲ, ಸುಳ್ಯದ ಕುಗ್ರಾಮದಲ್ಲಿದ್ದ ನನಗೆ ಸಂಘಟನೆ ಜವಾಬ್ದಾರಿ ನೀಡಿ ಬೆಳೆಸಿದೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.