LATEST NEWS
ಪರಶುರಾಮ ನಕಲಿ ಪ್ರತಿಮೆ ವಿಚಾರ, ಸುನೀಲ್ ಕುಮಾರ್ ರಾಜಿನಾಮೆ ಪಡೆದು ಬಂಧಿಸಿ ತನಿಖೆ ಮಾಡಿ – ಮುತಾಲಿಕ್ ಗುಡುಗು..!

ಶಾಸಕ ಸುನೀಲ್ ಕುಮಾರ್ ಕೂಡಲೇ ರಾಜಿನಾಮೆ ತಗೊಳ್ಳಿ ಮತ್ತು ಶಾಸಕರನ್ನು ಬಂಧಿಸಿ ತನಿಖೆ ಮಾಡಿ ಜೊತೆಗೆ ಆವತ್ತಿನ ಡಿಸಿ, ಮತ್ತು ಎಲ್ಲಾ ಅಧಿಕಾರಿಗಳನ್ನು ಅಮಾನತು ಮಾಡಿ ಎಂದು ಆಗ್ರಹಿಸಿದರು.
ಉಡುಪಿ : ತೀವ್ರ ವಿವಾದ ಸೃಷ್ಟಿಸಿದ್ದ ಕಾರ್ಕಳ ಪರಶುರಾಮ ಥೀಂ ಪಾರ್ಕ್ ನಕಲಿ ಪ್ರತಿಮೆ ವಿಚಾರ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಕಾರ್ಕಳ ಶಾಸಕ ಸುನೀಲ್ ಕುಮಾರ್ ವಿರುದ್ದ ಹರಿಹಾಯ್ದಿದ್ದಾರೆ.

ಪರಶುರಾಮ ಆರಾಧನೆ ದೇಶಾದ್ಯಂತ ಮಾಡುತ್ತಾರೆ, ದೇವರು ಅನ್ನೋ ನಂಬಿಕೆ ಇದೆ. ತುಳುನಾಡಿನ ಸೃಷ್ಟಿಕರ್ತ ಕೂಡ ಪರಶುರಾಮ.
ಪರಶುರಾಮನಿಗೆ ಘೋರ ಅಪಚಾರ, ಅಪಮಾನ, ದ್ರೋಹ ಮಾಡಲಾಗಿದೆ
. ಸ್ವಾರ್ಥ, ನೀಚ ರಾಜಕಾರಣಿ ಸುನಿಲ್ ಕುಮಾರ್ ಭೃಷ್ಟಚಾರಕ್ಕೆ ದೇವರನ್ನೂ ಬಿಡಲ್ಲ. ರಾಜ್ಯದಲ್ಲಿ ಹಿಂದೂ ಸಮಾಜ ತಲೆತಗ್ಗಿಸುವಂತಾಗಿದ್ದು ಹಿಂದೂ ಧರ್ಮದ ಹೆಸರಲ್ಲಿ ಶಾಸಕನಾದ ವ್ಯಕ್ತಿ ಈ ಮಟ್ಟಕ್ಕೆ ಇಳಿಯಬಾರದಿತ್ತು
ಈ ಶಾಸಕನಿಂದ ದೇವರನಾಡು ಉಡುಪಿಗೆ ಅಪಚಾರವಾಗಿದೆ .ಇಷ್ಟಾದರೂ ಸುನೀಲ್ ಬಾಯಿಮುಚ್ಚಿಕೊಂಡು ಕೂತಿರೋದು ಶೋಭೆ ತರಲ್ಲ.
ಇದು ನಾಲಾಯಕ್ ನಡವಳಿಕೆ, ಪವಿತ್ರ ಶಾಸಕ ಸ್ಥಾನಕ್ಕೆ ಕಳಂಕ ತಂದಿದ್ದು ಪರಶುರಾಮನ ಆರಾಧಕರು ,ಹಿಂದೂ ಸಮಾಜ ಚಪ್ಪಲಿಯಿಂದಲೇ ಪೂಜೆ ಮಾಡ್ತಾರೆ ಎಂದ ಮುತಾಲಿಕ್ ಸುನೀಲ್ ಕುಮಾರ್ ಅವರನ್ನು ತೀವ್ರ ತರಾಟೆಗೆ ತಗೊಂಡಿದ್ದಾರೆ.
ಚುನಾವಣೆ ಉದ್ದೇಶದಿಂದ ತರಾತುರಿಯಲ್ಲಿ ಉದ್ಘಾಟನೆ ಮಾಡಿದಿರಿ,ಕಾಮಗಾರಿಗೆ ಒಂದು ವರ್ಷಬೇಕು ಎಂದು ಇಂಜಿನಿಯರ್ ಗಳು ಹೇಳಿದ್ದರು ಆದ್ರೆ ಚುನಾವಣೆಯ ಲಾಭ ಪಡೆಯುವ ಕಾರಣಕ್ಕೆ 41 ದಿನದೊಳಗೆ ರಚನೆ ಮಾಡಿದ್ದಾರೆ.
ಆ ಸ್ಥಳಕ್ಕೆ ಕಟ್ಟಡ ನಿರ್ಮಾಣ ಮಾಡಲು ಅನುಮತಿ ಇಲ್ಲ ಆದ್ರೆ ಕಾನೂನುಬಾಹಿರವಾಗಿ ಕಟ್ಟಡ ನಿರ್ಮಾಣ ಆಗಿದೆ.
ಕಟ್ಟಡ ನಿರ್ಮಿಸಿದ ನಿರ್ಮಿತಿ ಕೇಂದ್ರದ ಮುಖ್ಯಸ್ಥರೇ ಡಿಸಿಯಾಗಿದ್ದು ಸ್ಚತ ಅಂದಿನ ಸಿಎಂ ಬೊಮ್ಮಾಯಿ ಉದ್ಘಾಟನೆ ಮಾಡಿದ್ದರು ಆದ್ರೆ 33 ಅಡಿ ಎತ್ತರದ ಕಂಚಿನ ಮೂರ್ತಿ ಅಂತ ಹೇಳಿದ್ದ ಆ ಮೂರ್ತಿಯೇ ಇವತ್ತು ಇಲ್ಲ.
ಮೂರ್ತಿಯನ್ನು ಕತ್ತರಿಸಿ ತೆಗೆದಿದ್ದಾರೆ, ಕಾಂಗ್ರೇಸ್ ನವರು ಕೂಡಾ ಇದರಲ್ಲಿ ಶಾಮೀಲಾಗಿದ್ದಾರೆ ಎಂದು ಆರೋಪಿಸಿದ ಅವರು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆಯಾದ್ರೂ ಬಿಜೆಪಿ ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದೀರಾ? ಎಂಬ ಸಂಶಯ ಮೂಡುತ್ತಿದೆ.
ಡಿಸಿ, ತಹಶಿಲ್ದಾರ್, ನಿರ್ಮಿತಿ ಕೇಂದ್ರ ದ ಅಧಿಕಾರಿಗಳು ಭಾಗಿಯಾಗಿದ್ದರೆ ಎಂಬ ಗುಮಾನಿ ಇದೆ .
ತನಿಖೆ ಯಾಕೆ ಮಾಡಿಲ್ಲ? ಎಂದು ಪ್ರಶ್ನೆ ಮಾಡಿದ ಮುತಾಲಿಕ್ ಉಸ್ತುವಾರಿ ಸಚಿವರು ಇದರಲ್ಲಿ ಅದ ಅಪಚಾರವನ್ನು ತನಿಖೆಯ ಮೂಲಕ ಬಹಿರಂಗ ಮಾಡಿ ಎಂದು ಒತ್ತಾಯಿಸಿದರು.
ಅವರು ಶಾಸಕ ಸುನೀಲ್ ಕುಮಾರ್ ಕೂಡಲೇ ರಾಜಿನಾಮೆ ತಗೊಳ್ಳಿ ಮತ್ತು ಶಾಸಕರನ್ನು ಬಂಧಿಸಿ ತನಿಖೆ ಮಾಡಿ ಜೊತೆಗೆ ಆವತ್ತಿನ ಡಿಸಿ, ಮತ್ತು ಎಲ್ಲಾ ಅಧಿಕಾರಿಗಳನ್ನು ಅಮಾನತು ಮಾಡಿ ಎಂದು ಆಗ್ರಹಿಸಿದರು.
ರಾತೋರಾತ್ರಿ ಮೂರ್ತಿ ತೆಗೆಸಿದ್ದು ಈಗಿನ ಸರ್ಕಾರ, ಹಾಗಾಗಿ ಕಾಂಗ್ರೇಸ್ ಕೂಡಾ ಭಾಗಿಯಾಗಿದ್ದು ತನಿಖೆ ಆಗೋವರೆಗೆ ಮತ್ತೆ ಕಂಚಿನ ಮೂರ್ತಿ ಕೂರಿಸೋಕೆ ಬಿಡಲ್ಲ, ವಿಷ್ಣು ದೇವರ ಆರನೇ ಅವತಾರಕ್ಕೆ ಈ ರೀತಿ ಅವಮಾನ ಆಗಿದ್ದು ಪರಶುರಾಮ ಪ್ರತಿಮೆ ವಿಚಾರದಲ್ಲಿ ಸುಪ್ರೀಂಕೋರ್ಟಿಗೆ ಹೋಗ್ತೇನೆ ಎಂದು ಮುತಾಲಿಕ್ ಗುಡುಗಿದ್ದಾರೆ.