LATEST NEWS
ಪ್ಯಾರಾಗ್ಲೈಡರ್ ಮೂಲಕ ಸ್ವೀಪ್ ಮಾಹಿತಿ ಕರಪತ್ರ ಹಂಚಿಕೆ
ಪ್ಯಾರಾಗ್ಲೈಡರ್ ಮೂಲಕ ಸ್ವೀಪ್ ಮಾಹಿತಿ ಕರಪತ್ರ ಹಂಚಿಕೆ
ಉಡುಪಿ ಮಾರ್ಚ್ 22: ಮತದಾರರಲ್ಲಿ ನೈತಿಕ ಮತದಾನದ ಕುರಿತು ಅರಿವು ಮೂಡಿಸಲು ಅಜ್ಜರಕಾಡಿನ ಸ್ಟೇಡಿಯಂನಲ್ಲಿ ಜಿಲ್ಲಾಡಳಿತ ಇಂದು ಪ್ಯಾರಾಗ್ಲೈಡರ್ ಹಾರಾಟವನ್ನು ಆಯೋಜಿಸಿತು.
ಪ್ಯಾರಾಗ್ಲೈಡರ್ ಮೂಲಕ ಮಾಹಿತಿ ಕರಪತ್ರವನ್ನು ಹಂಚಲಾಯಿತಲ್ಲದೆ, ನೆರೆದವರಿಗೆ ಮತದಾನದ ಕುರಿತು ಅರಿವು ಹಾಗೂ ಪ್ರತಿಜ್ಞಾ ವಿಧಿ ಬೋಧನೆಯನ್ನು ನೆರವೇರಿಸಲಾಯಿತು.
ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ಪ್ರತಿಜ್ಞಾ ವಿಧಿ ಬೋಧಿಸಿದರೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿ ಅವರು ಮತದಾನದ ಅಗತ್ಯ, ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮುಂತಾದ ಮಾಹಿತಿಗಳನ್ನು ನೀಡಿದರು.
ರಾಜಕೀಯ ಶಾಸ್ತ್ರ ಉಪನ್ಯಾಸಕರಾದ ನಿತ್ಯಾನಂದ ಅವರು ಮತದಾನದ ಹಕ್ಕಿನ ಬಗ್ಗೆ ವಿವರಿಸಿದರು. ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ರೋಶನ್ ಕುಮಾರ್ ಸ್ವಾಗತಿಸಿದರು. ಮತದಾನದ ಅರಿವು ಮೂಡಿಸುವ ಹಾಡು ಹಾಗೂ ಸಂದೇಶಗಳನ್ನು ಇದೇ ಸಂದರ್ಭದಲ್ಲಿ ಬಿತ್ತರಿಸಲಾಯಿತು.